Monday, February 9, 2026
Homeಆಧ್ಯಾತ್ಮಬೇಲೂರು: ಚನ್ನಕೇಶವ ದೇವಾಲಯಕ್ಕೆ ಉಪಸಭಾಪತಿ ರುದ್ರಪ್ಪ ಲಮಾಣಿ ಭೇಟಿ,ವಿಶೇಷ ಪೂಜೆ ಸಲ್ಲಿಕೆ!

ಬೇಲೂರು: ಚನ್ನಕೇಶವ ದೇವಾಲಯಕ್ಕೆ ಉಪಸಭಾಪತಿ ರುದ್ರಪ್ಪ ಲಮಾಣಿ ಭೇಟಿ,ವಿಶೇಷ ಪೂಜೆ ಸಲ್ಲಿಕೆ!

ಹಾಸನ: ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಹಾಸನ ಜಿಲ್ಲೆ, ಬೇಲೂರು ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಚನ್ನಕೇಶವ ದೇವಾಲಯಕ್ಕೆ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದ ಆಡಳಿತ ಮಂಡಳಿ ಮಂಗಳವಾದ್ಯಗಳೊಂದಿಗೆ ರುದ್ರಪ್ಪ ಲಮಾಣಿಯವರಿಗೆ ಸ್ವಾಗತ ಕೋರಿದರು. ನಂತರ ಶ್ರೀ ಚನ್ನಕೇಶವಸ್ವಾಮಿಗೆ ಲಮಾಣಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಜರಾಯಿ ಮಂತ್ರಿ ಆಗಿದ್ದ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಿದ್ದೆ. ಈ ದೇವಾಲಯ ಮುಂದಿನ ಪೀಳಿಗೆಗೆ ಉಳಿಯಬೇಕು. ಹೊಸತನ ತರಲು ಹೋಗಬಾರದು. ರಾಜ್ಯ ಸರ್ಕಾರ ಇದರ ನಿರ್ವಹಣೆ ಮಾಡುತ್ತಿದೆ ಅಷ್ಟೇ. ಇದರ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದರು

ಪುರಾತತ್ವ ಇಲಾಖೆ ದೇವಾಲಯ ಈಗ ಹೇಗಿದೆ ಹಾಗೆಯೇ ಉಳಿಸಬೇಕು, ಹೊಸತನ ತರಬಾರದು. ಈಗಿರುವ ಹೊಯ್ಸಳರ ಕಾಲದ ಅಮರಶಿಲ್ಪಿ ಜಕಣಾಚಾರಿ ಕೆತ್ತಿರುವ ಶಿಲ್ಪಕಲೆಗಳನ್ನು ಮುಂದಿನ ಪೀಳಿಗೆಗೆ ನೆನಪಾಗಿ ಉಳಿಸಬೇಕು. ನಾನು ಚಿಕ್ಕಮಗಳೂರಿಗೆ ಬಂದಿದ್ದೆ. ಹಾಗಾಗಿ ಬೇಲೂರು ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!