ಬೇಲೂರು: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು ಹಾಗೆ ಪ್ರತಿ ನಿತ್ಯ ಪೂಜೆ ಮಾಡುವ ಗಣಪತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.

ಹೌದು .. ಬೇಲೂರು ಪುರಸಭೆ ಆವರಣದಲ್ಲಿರೋ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಇಂದು ಈ ರೀತಿ ವಿಕೃತಿ ಕಂಡು ಬಂದಿದ್ದು ಗೇಟ್ ತೆಗೆದು ದೇವರಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರೋ ಕೀಚಕರು
ಪ್ರತಿನಿತ್ಯ ಗಣೇಶನಿಗೆ ಕೈ ಮುಗಿದು ವ್ಯಾಪಾರ ಆರಂಭಿಸೋ ವ್ಯಾಪಾರಿಗಳು ಬೆಳಗ್ಗೆ ಕೈ ಮುಗಿಯಲು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಈ ಕೂಡಲೇ ಇಂತ ಹೇಯ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೃತ್ಯ ಎಸಗಿದ ಆರೋಪಿಗಳ ಹುಡುಕಾಟಕ್ಕೆ ಶೋಧಕಾರ್ಯ ಮುಂದುವರೆದಿದೆ.
