Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

ಮೂಡಿಗೆರೆ: ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

ಮೂಡಿಗೆರೆ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮ ಹಾಗೂ ತ್ರಿಭುವನ್ ಸಹಕಾರ ವಿದ್ಯಾಲಯ ಸಂಶೋಧನೆ  ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ ದಿನಾಚರಣೆ ಕಾರ್ಯಕ್ರಮ ರೈತ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ಉತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಶ್ರೀ ಉತ್ತಮ್ ಕುಮಾರ್ ಮತ್ತು ಸಿ.ಈ.ಓ ಸಿತಿನ್ ಕುಮಾರ್ ಆವರನ್ನು  ಮಾನ್ಯ ವಿಧಾನ ಪರಿಷತ್ ಉಪಸಭಾಪತಿಗಳಾದ ಶ್ರೀ ಎಂ ಕೆ ಪ್ರಾಣೇಶ್ ಮತ್ತು ಗಣ್ಯರು ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಉತ್ತಮ್ ಕುಮಾರ್ ಮಾತನಾಡಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಸದಸ್ಯರ ಸಂಘಟನ್ಮಾಕ ಚಟುವಟಿಕೆ ಮತ್ತು ಶ್ರಮದ ಫಲವಾಗಿ ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಮುಚೂಣಿಗೆ ಬಂದಿರುವುದು ಹೆಮ್ಮಯ ಸಂಗತಿ ಎಂದರು ಹಾಗೆ ಸಂಘದ ಎಲ್ಲಾ ಪದಾಧಿಕಾರಿಗಳ ಪರಿಶ್ರಮದಿಂದಾಗಿ ಪ್ರಶಸ್ತಿ ಲಭಿಸಲು ಸಾಧ್ಯವಾಗಿದೆ ಎಂದು ಸಿಬ್ಬಂದಿಯನ್ನು ಶ್ಲಾಘಿಸಿದರು

ಪ್ರಶಸ್ತಿ ಪಡೆದ ಸಹಕಾರ ಸಂಘಕ್ಕೆ ಗ್ರಾಮಸ್ಥರು,ಸಂಘದ ಆಡಳಿತ ಮಂಡಳಿ ಸದಸ್ಯರು, ಮತ್ತು ಸಿಬ್ಬಂದಿ ವರ್ಗದವರು ಶುಭಕೋರಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ DCC ಬ್ಯಾಂಕ್ ನಿರ್ದೇಶಕರು ಹಳಸೆ ಶಿವಣ್ಣ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ  ಮಹಾಬಲ ಭಟ್ ಉಪಾಧ್ಯಕ್ಷ  ದಿವಾಕರ್ ಭಾರತಿ ರವೀಂದ್ರ ಹಂತೂರು ಸಹಕಾರ ಸಂಘದ ನಿರ್ದೇಶಕರಾದ ಆದರ್ಶ್ ಜನ್ನಪುರ. ನಯನ್ ಕಣಚೂರು,ರತನ್ ದೇವರುಂದ,ಪ್ರಸನ್ನ ದೇವರುಂದ ಸೇರಿದಂತೆ ಹಂತೂರು ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು. ಗ್ರಾಮಸ್ಥರು ಇದ್ದರು

ವರದಿ :ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!