ಚಿಕ್ಕಮಗಳೂರು: ಬಡವರ ಆಶ್ರಯ ಮನೆಗಳು ನೀಡುವಲ್ಲಿ ರಾಜ್ಯಸರ್ಕಾರ ವಿಫಲ ಹಾಗೂ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನ ಮುಂದಿಟ್ಟಿಕೊಂಡು ಬಿಜೆಪಿ ನಗರ ಮಂಡಲದಿಂದ ಶನಿವಾರ ಕಾರ್ಯಕರ್ತರು ನಗರಸಭಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಬಡವರು ಸಲ್ಲಿಸಿರುವ ಅರ್ಜಿಗಳಿಗೆ ನಗರಸಭೆಯಿಂದ ಸ್ಪಂದನೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು ಹಾಗೆ ಬಡವರಿಗೆ ನ್ಯಾಯ ಸಿಗಬೇಕಾದ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು ಅದಲ್ಲದೇ ರಾಜ್ಯ ಸರ್ಕಾರ ಜನ ವಿನೋಧಿ ನೀತಿಗಳನ್ನು ಅನುಸರಿಸುತ್ತಿದ್ದು ಕೂಡಲೇ ಈ ನಿಲುವುಗಳನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು
ಈ ಕುರಿತು ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ದೀನದಲಿತರು, ಬಡವರು ಹಾಗೂ ರೈತ ವಿರೋಧಿ ನೀತಿ ಆಡಳಿತವನ್ನು ನೀಡುವ ಮೂಲಕ ಸರ್ವಾಧಿಕಾರಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದರು.
ಕ್ಷೇತ್ರದ ಹಿಂದಿನ ಶಾಸಕರ ಆಡಳಿತ ಅವಧಿಯಲ್ಲಿ ಆಶ್ರಯ ಯೋಜನೆ, ಅಂಬೇಡ್ಕರ್ ಅವಾಸ್ ಯೋ ಜನೆ, ಪಿಎಂ ಆವಾಜ್ ಯೋಜನೆ, ಕೊಳಚೆ ನಿರ್ಮೂಲನಾ ಮಂಡಳಿಗಳಿಂದ ಕೈಗೊಂಡ ಯೋಜನೆಗಳು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಸಂಪೂರ್ಣ ನೆನೆಗುದಿಗೆ ಬಿದ್ದಿವೆ ಎಂದು ಆರೋಪಿದರು.
ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಎಂ. ಕೌಶಿಕ್, ನಗರಸಭೆ ಮಾಜಿ ಅಧ್ಯಕ್ಷರಾದ ಸುಜಾತ ಶಿವಕುಮಾರ್, ಮುತ್ತಯ್ಯ, ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ದೀಪ ರವಿಕು ಮಾರ್, ರೂಪಾಕುಮಾರ್, ಲಲಿತಾ ಬಾಯಿ, ಅಮೃತೇಶ್, ಮಣಿ, ರಾಜು, ಜಿಲ್ಲಾ ಬಿಜೆಪಿ ಮಹಿಳಾ ಮೋ ರ್ಚಾ ಅಧಕ್ಷೆ ಜಸಂತಾ ಅನಿಲಕುಮಾರ್, ಪವಿತ್ರ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸಚಿನ್ ಉಪಸ್ಥಿತರಿದ್ದರು.