Friday, February 27, 2026
Homeಜಿಲ್ಲಾಸುದ್ದಿಹಾಸನಾಂಬೆ ದೇಗುಲ ಕುರಿತು ಬ್ರಹ್ಮಾಂಡ ಗುರೂಜಿ ಆಘಾತಕಾರಿ ಭವಿಷ್ಯ!

ಹಾಸನಾಂಬೆ ದೇಗುಲ ಕುರಿತು ಬ್ರಹ್ಮಾಂಡ ಗುರೂಜಿ ಆಘಾತಕಾರಿ ಭವಿಷ್ಯ!

ಹಾಸನ: ಬ್ರಹ್ಮಾಂಡ ಗುರೂಜಿ ಅವರು ಹಾಸನಾಂಬೆ ದೇಗುಲದ ಕುರಿತು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ ಎಂದು ತಿಳಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅವಕಾಶಗಳು ಅಡಚಣೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. 2025 ರಿಂದ 2032ರ ಅವಧಿಯಲ್ಲಿ ಸಿದ್ದೇಶ್ವರನ ಕೃಪೆಯಿಂದ ‘‘ಘಟಪ್ರಭ ಪರಿವರ್ತನೆ’’ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಸಮಯದಲ್ಲಿ ಏಳು ಜನ ಅಕ್ಕ-ತಂಯರು ಸೇರಲಿದ್ದಾರೆ ಎಂದಿದ್ದಾರೆ. ಈ ಕೊನೆಯ ಅವಧಿಯಲ್ಲಿ ದರ್ಶನ ಪಡೆದವರು ಸಂತೋಷಪಡುತ್ತಾರೆ ಎಂದು ಹೇಳಿದ ಗುರೂಜಿ, ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ವರ್ಷದಿಂದ ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ‘ಈ ಜಗತ್ಪ್ರಸಿದ್ದ ಹಾಸನಾಂಬೆಯ ವೈಶಿಷ್ಟ್ಯತೆಯನ್ನು ಈ ಕೊನೆಯ ಅವಧಿಯಲ್ಲಿ ನಾವು ದರ್ಶನ ಮಾಡಿದೆವಲ್ಲ ಎಂದು ಸಂತೋಷ ಪಡುತ್ತೇವೆ. ಮುಂದಿನ ಅವಕಾಶಗಳು ನಮಗಲ್ಲ. ಯಾವ ಜನರಿಗೂ ಹಾಸನಾಂಬೆ ದರ್ಶನ ಆಗುವ ಅವಕಾಶಗಳು ಕಡಿಮೆ, ಅಡಚಣೆಗಳು ಎಷ್ಟು ಬರುತ್ತವೆ ಎಂಬುದನ್ನು ನೀವೇ ಮುಂದೆ ನೋಡುತ್ತೀರಿ’ ಎಂದು ಗುರೂಜಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!