Monday, February 9, 2026
Homeಜಿಲ್ಲಾಸುದ್ದಿನಾಳೆ ಹಸೆಮಣೆ ಏರಬೇಕಾದ ವಧು ಮಸಣಕ್ಕೆ.!; ಚಿಕ್ಕಮಗಳೂರಿನ ಸೊಲ್ಲಾಪುರದಲ್ಲೊಂದು ಮನಕಲಕುವ ಘಟನೆ

ನಾಳೆ ಹಸೆಮಣೆ ಏರಬೇಕಾದ ವಧು ಮಸಣಕ್ಕೆ.!; ಚಿಕ್ಕಮಗಳೂರಿನ ಸೊಲ್ಲಾಪುರದಲ್ಲೊಂದು ಮನಕಲಕುವ ಘಟನೆ

ಚಿಕ್ಕಮಗಳೂರಿನ ಅಜ್ಜಂಪುರದ ಸೊಲ್ಲಾಪುರದಲ್ಲೊಂದು ಮನಕಲಕುವ ಘಟನೆ ನಡೆದಿದೆ. ನಾಳೆ ಹೊಸ ಬದುಕಿಗೆ ಕಾಲಿಡಬೇಕಾಗಿದ್ದ ವಧು ಒಬ್ಬರು ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಜ್ಜಂಪುರದ ಸೊಲ್ಲಾಪುರದ ಶೃತಿ ಮೃತ ವಧು.

ಶೃತಿ ಅವರಿಗೆ ತರೀಕೆರೆಯ ದಿಲೀಪ್ ಎಂಬವರೊಂದಿಗೆ ಮದುವೆ ಫಿಕ್ಸ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ನಾಳೆ ಶೃತಿ ದಿಲೀಪ್ ಜೊತೆ ನವ ಜೀವನಕ್ಕೆ ಕಾಲಿಡಬೇಕಾಗಿತ್ತು. ಆದರೆ  ಇಂದು ಶೃತಿ ಬದುಕಿನಲ್ಲಿ ವಿಧಿ ಆಟವಾಡಿದೆ. ಲೋ ಬಿಪಿ, ಹೃದಯಾಘಾತದಿಂದ ವಧು ಶೃತಿ ಸಾವನ್ನಪ್ಪಿದ್ದಾರೆ. ಇದೀಗ ಮದ್ವೆ ಸಂಭ್ರಮದಲ್ಲಿದ್ದ ಎರಡೂ ಮನೆಗಳಲ್ಲೂ ನೀರವ ಮೌನ ಆವರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!