ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್ ಮೋಹನ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದ ಈ ಹಿನ್ನಲೆಯಲ್ಲಿ ಅಧಿಕಾರಿಗಳನ್ನ ಅಮಾನತು ಮಾಡಬೇಕು ಇಲ್ಲದಿದ್ದರೆ ಮಲೆನಾಡು ರಕ್ಷಣಾ ಸೇನಾ ವತಿಯಿಂದ ಸಕಲೇಶಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಜಿಲ್ಲಾಧ್ಯಕ್ಷ ದರ್ಶನ್ ತಿಳಿಸಿದರು. ಈ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ವರದಿ ಮಾಡಿತ್ತು

ನಗರದಲ್ಲಿ ಬುದುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜುಲೈ 12ರಂದು ಮಧ್ಯಾಹ್ನ ಸಮಯದಲ್ಲಿ ಸಕಲೇಶಪುರ ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್ ಮೋಹನ್ ಶೆಟ್ಟಿ ಎಂಬುವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಅಲ್ಲದೇ ಅಲ್ಲಿಯ ಅಧಿಕಾರಿ ಮಧುರ ಹಾಗೂ ಕಚೇರಿ ಸಿಬ್ಬಂದಿ ಜೊತೆ ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ ಇದರಿಂದ ಆರ್ ಟಿ ಓ ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಆರೋಪಿಸಿದ್ದಾರೆ
ಹಾಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಲೆನಾಡು ರಕ್ಷಣಾ ಸೇನೆ ವತಿಯಿಂದ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದು ಆದರೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲ ಈ ಎಲ್ಲಾ ಬೆಳವಣಿ ಗಮನಿಸಿದರೆ ಅವರು ಸಹ ಈ ಅಧಿಕಾರಿಗಳ ಜೊತೆ ಕೈಜೋಡಿಸಿದ್ದಾರೆಂದು ಅನುಮಾನ ವ್ಯಕ್ತವಾಗುತ್ತಿದೆ.
ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮಲೆನಾಡು ರಕ್ಷಣಾ ಸೇನ ವತಿಯಿಂದ ಶುಕ್ರವಾರ ಸಕಲೇಶಪುರ ತಾಲೂಕು ಕಚೇರಿ ಮುಂಭಾಗದಿಂದ ಎಆರ್ ಟಿಒ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಸಿದರು
ಈ ವೇಳೆ ಮಲೆನಾಡು ರಕ್ಷಣಾ ಸೇನೆ ಉಪಾಧ್ಯಕ್ಷರಾದ ಎಚ್.ಸಿ. ನಾಗೇಂದ್ರ ಹೊಸಕೊಪ್ಪಲು, ಜಂಟಿ ಕಾರ್ಯದರ್ಶಿ ಪಾಲಾಕ್ಷ ಎಚ್ಎಸ್, ಸಂಚಾಲಕರದ ಶರಣ ಶೆಟ್ಟಿ, ಆನಂದ್ ಹಾಗೂ ಯುವರಾಜ್ ಉಪಸ್ಥಿತರಿದ್ದರು