ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ರಾಜಕೀಯ ಜಂಜಡದಿಂದ ದೂರವಿದ್ರು. ಕುಟುಂಬ ಸದಸ್ಯರು, ಆಪ್ತರ ಜತೆಗೆ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಶಿಕಾರಿಪುರದಲ್ಲಿರುವ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹುಚ್ಚರಾಯಸ್ವಾಮಿ ಯಡಿಯೂರಪ್ಪ ಕುಟುಂಬದ ಆರಾಧ್ಯ ದೇವರು. ಇಲ್ಲಿಗೆ ಭೇಟಿ ನೀಡಿದ ಬಳಿಕ ಶಿಕಾರಿಪುರ ರಾಘವೇಂದ್ರ ಮಠಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು. ಯಡಿಯೂರಪ್ಪ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.



