ಶಿವಮೊಗ್ಗ: ಕೋಳಿ ತುಂಬಿದ್ದ ಕ್ಯಾಂಟರ್ ಲಾರಿ ಪಲ್ಟಿಯಾಗಿ ನೂರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಆನಂದಪುರಂ ಬಳಿಯ ಮುಂಬಾಳು ಕೆರೆ ಬಳಿ ನಡೆದಿದೆ.
ಕಡೂರಿನಿಂದ ಸಾಗರಕ್ಕೆ ಹೊರಟಿದ್ದು, ಸುಮಾರು ನಾಲ್ಕೂವರೆ ಟನ್ನಷ್ಟು ಕೋಳಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಕಾರು ಅಡ್ಡ ಬಂದ ಕಾರಣ ಕ್ಯಾಂಟರ್ ಲಾರಿ ಪಲ್ಟಿಯಾಗಿದೆ. ಇದರಿಂದ ಸುಮಾರು 700ಕ್ಕೂ ಹೆಚ್ಚು ಕೋಳಿಗಳು ರಸ್ತೆಯಲ್ಲಿಯೇ ಅಫಾತಕ್ಕೀಡಾಗಿ ಸಾವನ್ನಪ್ಪಿವೆ.

ಲಾರಿಯಿಂದ ರಸ್ತೆಗೆ ಬಿದ್ದಿದ್ದರಿಂದ ನೂರಾರು ಕೋಳಿಗಳು ಸಾವನ್ನಪ್ಪಿದ್ದವು ಆಗ ದಾರಿಯಲ್ಲಿ ಹೋಗುವವರು ತಮ್ಮ ವಾಹನವನ್ನು ರಸ್ತೆಯಲ್ಲಿಯೇ ಬಿಟ್ಟು ನನಗೊಂದು, ನಮ್ಮ ಮನೆಗೊಂದು ಎಂಬಂತೆ ಕೋಳಿಗಳನ್ನು ಹಿಡಿದು ತೆಗೆದುಕೊಂಡು ಹೋಗುತ್ತಿದ್ದರು.
ಸದ್ಯ ಕ್ಯಾಂಟರ್ ಅನ್ನು ರಸ್ತೆಯಿಂದ ತೆರವು ಮಾಡಲಾಗಿದ್ದು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಚಾರ ಮುಕ್ತಗೊಳಿಸಿದ್ದಾರೆ.
