Friday, February 13, 2026
Homeಕ್ರೈಮ್ಚಿಕ್ಕಮಗಳೂರು : ಕಾಫಿನಾಡಲ್ಲಿ ಮುಂದುವರಿದ ಗಾಳಿ ಮಳೆಯ ಆರ್ಭಟ; ಚಾಲಕನ ನಿಯಂತ್ರಣ ತಪ್ಪಿ 2 ಕಡೆ...

ಚಿಕ್ಕಮಗಳೂರು : ಕಾಫಿನಾಡಲ್ಲಿ ಮುಂದುವರಿದ ಗಾಳಿ ಮಳೆಯ ಆರ್ಭಟ; ಚಾಲಕನ ನಿಯಂತ್ರಣ ತಪ್ಪಿ 2 ಕಡೆ ಪ್ರತ್ಯೇಕ ಅಪಘಾತ

ಚಿಕ್ಕಮಗಳೂರು : ಕಾಫಿನಾಡಲ್ಲಿ ಮುಂದುವರಿದ ಗಾಳಿ ಮಳೆಯ ಆರ್ಭಟ ಮುಂದುವರೆದಿದ್ದು ಚಾಲಕನ ನಿಯಂತ್ರಣ ತಪ್ಪಿ 2 ಕಡೆ ಪ್ರತ್ಯೇಕ ಅಪಘಾತವಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೆಬ್ಬರಿಗೆಯ ನಜರತ್ ಸ್ಕೂಲ್ ಬಳಿ ಪೌಲ್ಸ್ ಎಂಬುವರ ಮನೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಗುದ್ದಿದೆ. ಇನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಮೇಲಿಂದ ಮೇಲೆ ಅಪಘಾತವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಒಂದೇ ಜಾಗದಲ್ಲಿ ವರ್ಷದಲ್ಲಿ 60ಕ್ಕೂ ಹೆಚ್ಚು ಅಪಘಾತವಾಗಿದೆ.ಮೇಲಿಂದ ಮೇಲೆ ಅನಾಹುತವಾದ್ರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.ಕೂಡಲೇ ರಸ್ತೆ ಕಾಮಗಾರಿಯನ್ನ ದುರಸ್ಥಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಸ್ಥಳಗಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ರು ಅದಕ್ಕೆ ಗುದ್ದಿ ವಾಹನಗಳು ಅಪಘಾತವಾಗುತ್ತಿವೆ. ಇನ್ನು ಅಪಘಾತದ ಬಗ್ಗೆ ಬಣಕಲ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!