
ಚಿಕ್ಕಮಗಳೂರು : ರಸ್ತೆ ಮಧ್ಯೆಯೇ ಕಾರೊಂದು ಧಗ-ಧಗ ಹೊತ್ತಿ ಉರಿದ ಘಟನೆ ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ಬಳಿ ನಡೆದಿದೆ.

ಅಪಘಾತವಾಗಿದ್ದ ಕಾರನ್ನ ಮಂಗಳೂರಿಗೆ ಎಳೆದೊಯ್ಯುವಾಗ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರು ಹೊತ್ತಿ ಉರಿದಿದೆ. ರಸ್ತೆ ಮಧ್ಯೆಯೇ ಧಗ-ಧಗ ಉರಿದು, ಕಾರು ಸಂಪೂರ್ಣ ಭಸ್ಮವಾಗಿದೆ.

ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ತಿರುವಿನಲ್ಲಿ ಅಪಘಾತ ನಡೆದಿತ್ತು. ರಸ್ತೆ ಬದಿ ಇದ್ದ ಟಿಂಬರ್ ಮರಕ್ಕೆ ಡಿಕ್ಕಿ ಕಾರು ಹೊಡೆದಿತ್ತು. ಘಟನೆ ನಡೆದ ಸ್ಥಳದಿಂದ ತುಸು ದೂರಕ್ಕೆ ಕಾರಿನ್ನು ಕೊಂಡೊಯ್ಯುವಾಗ ಬೆಂಕಿ ಕಾಣಿಸಿಕೊಂಡಿದೆ.ಇನ್ನು ಅಪಘಾತವಾದಾಗ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದರು. ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
