ಮೂಡಿಗೆರೆ: ತಾಲೂಕಿನ ಬಾಳೂರು ಹೋಬಳಿಯ ಮರ್ಕಲ್ ಎಸ್ಟೇಟ್ ಕಾಫಿ ತೋಟದೊಳಗೆ ಗುರುವಾರ ಮಧ್ಯಾಹ್ನ ಜಾನುವಾರು ಹತ್ಯೆಯಾಗಿ ಮಾಂಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

www.publicimpact.in
ಈ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಆರೋಪಿಗಳಾದ ಅಜೀರ್ ಅಮ್ಮನ್, ಅಕ್ಕಾಸ್ ಅಲೀ, ನಜ್ರುಲ್ ಹಕ್, ಇಜಾಬುಲ್ ಹಕ್, ಮೆಹರ್ ಅಲಿ, ಮಂಜುಲ್ ಹಕ್ ನನ್ನು ಬಂಧಿಸಿದ್ದಾರೆ.

ಘಟನೆಯ ವಿವರ:
ಜುಲೈ 9ರಂದು ಮಧ್ಯಾಹ್ನ 3:30 ರಿಂದ ಸಂಜೆ 7:30 ರ ಒಳಗೆ ಯಾರೋ ಅಪರಿಚಿತ ವ್ಯಕ್ತಿಗಳು ತೋಟದೊಳಗೆ ಒಂದು ಜಾನುವಾರುವನ್ನು (ಹಸು) ಹತ್ಯೆ ಮಾಡಿ ಮಾಂಸ ಮಾಡಿರುವುದು ಕಂಡು ಬಂದಿದೆ. ಜಾನುವಾರುವಿನ ತಲೆ, ಕಾಲುಗಳು, ಚರ್ಮ, ಮಾಂಸ, ಲಿವರ್, ಇತರೆ ಅಂಗಾಂಗಗಳು ಸ್ಥಳದಲ್ಲೇ ಪತ್ತೆಯಾಗಿವೆ.
ಸ್ಥಳ ಪರಿಶೀಲನೆಗೆ ಆಗಮಿಸಿದ ಬಾಳೂರು ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ಸ್ಥಳದಲ್ಲಿ ಮಾಂಸ ತಯಾರಿಸಲು ಮರದ ತುಂಡು ಹಾಗೂ ಅಂಗಾಂಗಗಳನ್ನು ಹೂಳಲು ಬಳಸಿದ ಗುದ್ದಲಿ ಸ್ಥಳದಲ್ಲಿ ಸಿಕ್ಕಿವೆ.
ಹಾಗೆ ನಮ್ಮ ತೋಟದಲ್ಲಿ ಸುಮಾರು 15 ಅಸ್ಸಾಂ ಮೂಲದ ಕಾರ್ಮಿಕರು ಮತ್ತು ಅವರ ಕುಟುಂಬವಿದೆ. ಅವರಲ್ಲಿ ಕೆಲವರು ಮದ್ಯಾಹ್ನ 3:30 ನಂತರ ತೋಟದೊಳಗೆ ಓಡಾಡುತ್ತಿರುವುದು ಕಂಡುಬಂದಿತ್ತು. ಸೌದೆಗಾಗಿ ಬಂದಿರಬಹುದು ಎಂದು ನಾನು ಗಮನಿಸಿಲ್ಲ, ದೂರದಿಂದ ನೋಡಿದ್ದುದು ಯಾರೋ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗಲಿಲ್ಲ,” ಎಂದು ರೈಟರ್ ಅಭಿಲಾಷ್ ಪೊಲೀಸರಿಗೆ ತಿಳಿಸಿದ್ದಾರೆ.
ಜಾನುವಾರುವಿನ ಅಂಗಾಂಗಗಳನ್ನು ಪಶುವೈದ್ಯರ ಸಹಾಯದಿಂದ ಪರೀಕ್ಷಿಸಿ, ನಂತರ ಉಪ ವಿಭಾಗೀಯ ದಂಡಾಧಿಕಾರಿಗಳ ಅನುಮತಿಯನ್ನು ಪಡೆದು ನಾಶಪಡಿಸಲಾಯಿತು. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ 303(2) ಬಿ.ಎನ್.ಎಸ್ ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಕಲಂ 12(1) ಅನ್ವಯ ಪ್ರಕರಣ ದಾಖಲಾಗಿದೆ. ಅಸ್ಸಾಂ ಮೂಲಕ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಈ ಘಟನೆ ಜಾನುವಾರು ಪಾಲಕರಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಇಂಥ ಕೃತ್ಯಗಳನ್ನು ತೀವ್ರವಾಗಿ ತಡೆಯಬೇಕೆಂದು ಸ್ಥಳೀಯರು ಸರ್ಕಾರ ಮತ್ತು ಪೊಲೀಸರ ಮುಂದೆ ಆಗ್ರಹಿಸಿದ್ದಾರೆ.