ಚಿಕ್ಕಮಗಳೂರು; ಸತತ 20 ವರ್ಷಗಳ ಆಡಳಿತದ ನಂತರವೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಆಡಳಿತ ವೈಖರಿ ಹಾಗೂ ಎನ್ ಡಿ ಎ ಯ ಮೈತ್ರಿ ಕೂಟವನ್ನು ಒಪ್ಪಿದ ಬಿಹಾರದ ಜನತೆ ಮಹಾಘಟಬಂಧನದ ಮಹಾ ಮೈತ್ರಿಯನ್ನು ಸಾರಾಸಗಟಾಗಿ ಧಿಕ್ಕರಿಸಿ ಬಿಹಾರ ವಿಧಾನ ಸಭಾ ಚುನಾವಣೆಯ ಅಭೂತಪೂರ್ವ ಗೆಲುವನ್ನು ನೀಡಿದ್ದಾರೆ ಎಂದು ಅಗಳಗಂಡಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು .
ಕಾರ್ಯಕ್ರಮದಲ್ಲಿ ಜಯಪುರ ಗ್ರಾ ಪಂ ಅಧ್ಯಕ್ಷ ಕರುಣಾಕರ , ಮೇಗುಂದಾ ಹೋಬಳಿ ಪ್ರಧಾನ ಕಾರ್ಯದರ್ಶಿ ಹಾಲಪ್ಪ , ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಸಂತೋಷ್ ಅರನೂರು , ಮುಖಂಡರಾದ ಸುರೇಶ್ , ಪದ್ಮನಾಭ , ಸುಭ್ರಮಣ್ಯ ಹುಲುಗರಡಿ , ಗೋಪಾಲ ಕೃಷ್ಣ ನೀರ್ಕಟ್ಟು , ಕೃಪಾಲ , ಗಣೇಶ , ಸುಬ್ರಹ್ಮಣ್ಯ ಸೋಮನಕುಡಿಗೆ , ಸತೀಶ್ , ಶ್ರೀನಾಥ್ , ಲ್ಯಾಂಪ್ಸ್ ಸುರೇಂದ್ರ , ಅವಿನಾಶ್ , ಮನು , ಮಂಜುನಾಥ್ ಹಾಗೂ ಅನೇಕರಿದ್ದರು .ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು .
