ಚಿಕ್ಕಮಗಳೂರು : ಕಡೂರು ವಲಯ ಹಿರೇನಲ್ಲೂರು ಕಲ್ಲೇನಹಳ್ಳಿ ಗ್ರಾಮದ ಸರ್ವೇ ನಂ. 11ರಲ್ಲಿ ಒಂದೂವರೆ ಅಥವಾ ಎರಡು ವರ್ಷ ಪ್ರಾಯದ 3 ಕೃಷ್ಣಮೃಗಗಳನ್ನು (2 ಹೆಣ್ಣು, 1 ಗಂಡು) ಬೇಟೆಗಾರರು ಗುಂಡು ಹಾರಿಸಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ 7 ದಿನದೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೌದು .. ಬಾಸೂರು ಕೃಷ್ಣಮೃಗ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕೃತ್ಯ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತುರಾತುರಿಯಲ್ಲಿ ಮಂಗಳವಾರ ಸಂಜೆ ಮೃತ ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.
ಹೀಗಾಗಿ ಅಂದೇ ರಾತ್ರಿ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದ ಈಶ್ವರ್ ಖಂಡ್ರೆ ಅಂದು ಸಂಜೆ 6.45ಕ್ಕೆ ಆರ್. ಎಫ್. ಓ. ಸ್ಥಳಕ್ಕೆ ಕಳುಹಿಸಿದ್ದ ಮಾಹಿತಿ ಮಾತ್ರ ನೀಡಿದ್ದ ಅಧಿಕಾರಿಗಳು ಆದ್ರೆ, ಅಂದೇ ಸಂಜೆ 4 ಗಂಟೆಯೊಳಗೆ ಮರಣೋತ್ತರ ಪರೀಕ್ಷೆ ನಡೆದಿರೋ ಶಂಕೆ
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವರದಿ ಕೇಳಿರೋ ರಾಜ್ಯ ಸರ್ಕಾರ ಹಾಗೆ ಪ್ರಕರಣವನ್ನ ಮುಚ್ಚಿಹಾಕುವ ಯತ್ನದ ಆರೋಪ ಕೇಳಿ ಬಂದಿತ್ತು. ಅತ್ಯಾಧುನಿಕ ಶಸ್ತ್ರಾಸ್ತದಿಂದ 3 ಕೃಷ್ಣಮೃಗಗಳನ್ನ ಬೇಟೆಗಾರರು ಗುಂಡು ಹಾರಿಸಿ ಹತ್ಯೆ ಮಾಡಿರುವ ಶಖೆ ವ್ಯಕ್ತವಾಗಿದೆ.
