ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಮತ್ತೆ ಮುಂದುವರೆದಿದ್ದು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾಲೀಕನ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ.

ಹೌದು .. T.M. ಸುನೀಲ್ ಕುಮಾರ್ ಎಂಬುವರ ಮೇಲೆ ಕಾಡುಕೋಣ ಎರಗಿ ಭುಜ ಹಾಗೂಭುಜದ ಮೇಲೆ ಗಾಯಗಳನ್ನು ಮಾಡಿದೆ.ಮೂರು ಬಾರಿ ಕಾಡುಕೋಣ ದಾಳಿ ಮಾಡುಲು ಯತ್ನಿಸಿದೆ. ಈ ವೇಳೆ ಕಾಡುಕೋಣನೀಂದ ತಪ್ಪಿಸಿಕೊಳ್ಳಲು ಮುಂದಾದಾಗ ತಿವಿದಿದೆ. ಕಾಡುಕೋಣ ದಾಳಿ ವೇಳೆ ಸುನೀಲ್ ಅವರು ಅರಚಿಕೊಂಡಾಗ ಕಾರ್ಮಿಕರು ತಕ್ಷಣ ಸ್ಥಳಕ್ಕೆ ಬರುವಾಗ ಕಾಡುಕೋಣ ಅಲ್ಲಿಂದ ಓಡಿಹೋಗಿದೆ.
ಘಟನೆ ನಡೆದ ಕೆಲ ಕ್ಷಣದಲ್ಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಗಾಯಾಳು ಸುನಿಲ್ ಅವರನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಿರಂತರವಾಗಿ ಉಪಟಳ ನೀಡುತ್ತಿರುವ ಕಾಡುಕೋಣವನ್ನು ಸೆರೆ ಹಿಡಿಯಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
