ಚಿಕ್ಕಮಗಳೂರು: ಸ್ಯಾಂಡಲ್‌ವುಡ್ ಫಸ್ಟ್ Rank ರಾಜು ಸಿನಿಮಾ ಮೂಲಕ ಗಮನ ಸೆಳೆದ ನಟ ಗುರುನಂದನ್ ಅವರ ತೋಟದ ಮನೆಗೆ ಕಾಡಾನೆ ನುಗ್ಗಿದೆ.
ಹೌದು .. ಮೂಡಿಗೆರೆ ತಾಲೂಕಿನ ಗೋಣಿಬೀಡು ಕಸ್ಕೆಬೈಲ್ ಗ್ರಾಮದಲ್ಲಿಯ ಇವರ ವಿಲ್ಲಾ ತೋಟಕ್ಕೆ ಆನೆ ನುಗ್ಗಿದ್ದು ನು ಹಾನಿ ಮಾಡಿದಂತೆ ಕಾಣೋದಿಲ್ಲ. ಆದರೆ, ಆನೆ ಬಂದು ಮೊದಲು ಈಜುಕೊಳದಲ್ಲಿರೋ ನೀರನ್ನಕುಳಿಯುತ್ತದೆ. ಮತ್ತೆ ಆಕಡೆಯಿಂದ ಈಕಡೆ ಏನೋ ಹುಡುಕುವ ಹಾಗೆ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗಿದೆ
ಇಡೀ ಗ್ರಾಮಕ್ಕೆ ಪ್ರತಿ ಬೇಸಿಗೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದಿರುವ ಅವರು, ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ನಟ ಗುರುನಂದನ್ ಬೇಸರ ಹೊರಹಾಕಿದ್ದಾರೆ.‘40-50 ಆನೆಗಳು ಬರುತ್ತವೆ. ನಾಡಿಗೆ ಬಂದು ಅವು ಹಾಳು ಮಾಡುತ್ತಿವೆ. ಶಾಸಕರು, ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ನಟ ಗುರುನಂದನ್ ಈಗೊಂದು ಮನವಿ ಮಾಡಿದ್ದಾರೆ.
