ಚಿಕ್ಕಮಗಳೂರು: ಬಾಹ್ಯಕಾಶದ ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ 10ನೇ ವರ್ಷದ ಪುಣ್ಮಸ್ಮರಣೆ ಅಂಗವಾಗಿ ನಗರದ ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದಿಂದ ಕಚೇರಿಯಲ್ಲಿ ಭಾನುವಾರ ಭಾವಚಿತ್ರಕ್ಕೆ ಮುಖಂಡರುಗಳು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಿ.ರಘು ತಮಿಳುನಾಡಿನ ರಾಮೇಶ್ವರದ ಮುಸ್ಲೀಂ ಬಡಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಜೀವನದಲ್ಲಿ ಅನೇಕ ಏರುಪೇರುಗಳನ್ನು ಕಂಡವರು. ಬಳಿಕ ಬಾಹ್ಯಕಾಶ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ರಾಷ್ಟ್ರದ ಪ್ರಗತಿಗಾಗಿ ದುಡಿದ ಮಹಾಚೇತನ ಎಂದರು.
ಸಮಾಜದ ಯುವಜನರಿಗೆ ಮಾದರಿ ವ್ಯಕ್ತಿಯಾಗಿ ಅಬ್ದುಲ್ ಕಲಾಂ ಸ್ಪೂರ್ತಿ ನೀಡುತ್ತಾರೆ. ಮರಣಕ್ಕೂ ಮುನ್ನ ತಮ್ಮ ಹೆಸರಿನಲ್ಲಿ ರಜೆ ಘೋಷಿಸದೇ ಒಂದುಗಂಟೆ ಹೆಚ್ಚು ಕೆಲಸ ನಿರ್ವಹಿಸಲಿ ಎಂದು ಸೂಚಿಸಿದ್ದ ರು. ಮರಣದ ನಂತರ ಇಂದಿಗೂ ಜೀವಂತಿಕೆ ಉಳಿಸಿಕೊಂಡಿರುವ ಮಹಾಮೇಧಾವಿ ಎಂದು ಹೇಳಿದರು.
ಸಂಘದ ಸಲಹೆ ಸಮಿತಿ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ ವಿಜ್ಞಾನ ಕ್ಷೇತ್ರದಲ್ಲಿ ಅಬ್ದುಲ್ ಕಲಾಂ ನೀಡಿದ ಕೊಡುಗೆಗಳು ವಿಶ್ವದ ಬಲಾಡ್ಯ ದೇಶಗಳು ಭಾರತದತ್ತ ನೋಡುವಂತೆ ಮಾಡಿತು. 1998ರಲ್ಲಿ ಪೋ ಖ್ರಾನ್ ಪರಮಾಣು ಪರೀಕ್ಷೆಗಳಲ್ಲಿ ಅವರು ಪ್ರಮುಖ ತಾಂತ್ರಿಕ ಮತ್ತು ರಾಜಕೀಯ ಪಾತ್ರವನ್ನು ವಹಿಸಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮೂರ್ತಿ, ಯುವಘಟಕದ ಅಧ್ಯಕ್ಷ ಕೆ.ಕುಮಾರ್, ಕಾರ್‍ಯ ದರ್ಶಿ ಜಿ.ಕೆ.ಕಾರ್ತೀಕ್, ಸದಸ್ಯರಾದ ಮಂಜು, ಕೇಶವ, ರವಿಕುಮಾರ್, ರಾಮಣ್ಣ, ಭರತ್, ದಕ್ಷಿಣಮೂರ್ತಿ, ಲಕ್ಷ್ಮೀ, ವೆಂಕಟೇಶ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.