ಚಿಕ್ಕಮಗಳೂರು: ಇಂದು ಕಬ್ಬಿಣಸೇತುವೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೆಡಿಪಿ ಸಭೆ ಕರೆದಿದ್ದು ಅಧಿಕಾರಿಗಳು ಬರದೇ ಬೇಜವಾಬ್ದಾರಿತನಕ್ಕೆ ಗ್ರಾಮ ಪಂಚಾಯತ್ ಸದಸ್ಯ ಸ್ವರೂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸಭೆಗೆ 38 ಇಲಾಖೆಗಳಿಗೆ ಆಹ್ವಾನ ನೀಡಿದ್ದು ಕೇವಲ ನಾಲ್ಕೈದು ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಿದ್ದು ಅಧಿಕಾರಿಗಳ ವಿರುದ್ದ ದೂರಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ವಿಫಲತೆ ಕಂಡಿದ್ದು. ಸಾರ್ವಜನಿಕ ಸೇವೆಯಲ್ಲಿರ ಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರಹಾಕಿದರು. ಸಭೆಯಲ್ಲಿ ಕುರ್ಚಿಗಳು ಖಾಲಿ ಹೊಡೆದಿದ್ದು ಜವಾಬ್ದಾರಿ ಸ್ಥಾನದಲ್ಲಿರಬೇಕಾದ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ಗುಡುಗಿದರು. ಅಧಿಕಾರಿಗಳ ಗೈರಿನಿಂದಾಗಿ ಸಭೆ ರದ್ದು ಗೊಳಿಸಲಾಗಿದೆ
ಸಭೆಯಲ್ಲಿ ಭಾಗವಹಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಮುಂದಿನ ಸಭೆಯಲ್ಲಿ ಇಂತಹ ಘಟನೆಗಳು ನಡೆದಲ್ಲಿ ಗ್ರಾಮ ಪಂಚಾಯಿತಿ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳ ಧೋರಣೆ ಖಂಡನೀಯ ಸಭೆಗೆ ಗೈರಾದ ಅಧಿಕಾರಿಗಳ ಸಂಬಳ ಸ್ಥಗಿತ ಗೊಳಿಸಬೇಕು ಎಂದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೇ ಅನುಸೂಯ, ಸದಸ್ಯರಾದ ನಳಿನಾ,ದೇವರಾಜು, ಮಂಜಯ್ಯ ಮಾಣಿಮಕ್ಕಿ, ಮೇಘಶ್ರೀ, ಕುಸುಮ, ಹರಿಣಾಕ್ಷಿ ಮಹೇಶ್, ಮಂಜುಳ, ರುದ್ರೇಶ್, ಜಿನ್ನಪ್ಪ ಉಪಸ್ಥಿತರಿದ್ದರು