ಚಿಕ್ಕಮಗಳೂರು: ನಗರದ ಟಿಪ್ಪುನಗರದ ಆಟೋ ಸರ್ಕಲ್ ಬಳಿ ತನ್ನ ನಿವಾಸದಲ್ಲೇ ಗೋವುಗಳನ್ನ ಕತ್ತರಿಸಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ಟಿಪ್ಪು ನಗರ ನಿವಾಸಿ ಮುಜೀಬ್ ಅಹ್ಮದ್ ಖುರೇಶಿ (42) ಬಂಧಿತ ವ್ಯಕ್ತಿಯಾಗಿದ್ದಾನೆ. ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಮನೆಗೆ ದಾಳಿ ನಡೆಸಿ ಅಂದಾಜು 15 ಸಾವಿರ ಮೌಲ್ಯದ 50 ಕೆಜಿ ಗೋಮಾಂಸ, ತಕ್ಕಡಿ, ಕಬ್ಬಿಣದ ಹುಕ್ಕುಗಳು. ಕಬ್ಬಿಣದ ಬಟ್ಟನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಿಎಸ್ʼಐ ಶಂಭುಲಿಂಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.