ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಕರಡಿಗಳು ಓಡಾಡುತ್ತಿವೆ. ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಸಮೀಪ ಕರಡಿಯೊಂದು ವಾಕಿಂಗ್ ಮಾಡುತ್ತಿರುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುವ ಮುನ್ನ ಕರಡಿ ಪರಾರಿಯಾಗಿದೆ.
ಮೊನ್ನೆ ಲಕ್ಕವಳ್ಳಿ ಸಮೀಪ ಬೆಳಗ್ಗೆ ಹನ್ನೊಂದು ಗಂಟೆಗೆ ಮುಖ್ಯ ರಸ್ತೆಯಲ್ಲಿ ರನ್ನಿಂಗ್ ರೇಸ್ ನಡೆಸಿದ ಸುದ್ದಿ ಮರೆಯುವ ಮುಂಚೆ ನಗರದ ಮುಖ್ಯ ಸ್ಥಳದಲ್ಲಿ ಕರಡಿ ಸಂಚಾರ ನಡೆಸಿರುವುದು ಜನರಿಗೆ ಭಯ ತಂದಿದೆ.
