Monday, March 16, 2026
Homeಕ್ರೈಮ್ಚಿಕ್ಕಮಗಳೂರು: ತೋಟದಲ್ಲಿ ಜೇನು ಹುಳಗಳು ದಾಳಿ: ಅಪ್ಪ ಸಾವು, ಮಗ ಸೇಫ್!

ಚಿಕ್ಕಮಗಳೂರು: ತೋಟದಲ್ಲಿ ಜೇನು ಹುಳಗಳು ದಾಳಿ: ಅಪ್ಪ ಸಾವು, ಮಗ ಸೇಫ್!

ಚಿಕ್ಕಮಗಳೂರು : ಜೇನು ಹುಳಗಳ ದಾಳಿಗೆ ರೈತ ಬಲಿಯಾಗಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

ಹೌದು .. ಕರಿಯಾನಾಯ್ಕ (61) ಮೃತ ರೈತ. ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಜೇನು ಹುಳಗಳು ದಾಳಿ ನಡೆಸಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಈ ವೇಳೆ ಸಖರಾಯಪಟ್ಟಣ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಅಂದ ಹಾಗೆ ಕರಿಯಾನಾಯ್ಕನ ಮಗ ಪ್ರದೀಪ್ ಮೇಲೂ ಜೇನು ದಾಳಿ ನಡೆದಿದ್ದು ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!