ಚಿಕ್ಕಮಗಳೂರು: ಅಂಗನವಾಡಿ ಉದ್ಯೋಗಿಗಳ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷರಾದ ಅಮ್ಜದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೌರವದನ ಹೆಚ್ಚಿಸುವ 6ನೇ ಗ್ಯಾರಂಟಿಯ ಜಾರಿಗೆ ಆಗ್ರಹಿಸಿ, 2011 ರಿಂದ ನಿವೃತ್ತರಾದವರೆಲ್ಲರಿಗೂ ಗ್ರಾಚ್ಯುಟಿ ನೀಡುವಂತೆ ಒತ್ತಾಯಿಸಿ, ಬಲವಂತವಾಗಿ ಬಿ ಎಲ್ ಓ ಜವಾಬ್ದಾರಿ ಹೊರಿಸುತ್ತಿರುವುದನ್ನು ವಿರೋಧಿಸಿ ಈ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಬೇಡಿಕೆ ಈಡೇರಿರುವವರೆಗೂ ನಮ್ಮ ಈ ಹೋರಾಟ ಮುಂದುವರಿಯುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಯಮ್ಮ, ಗ್ರೇಟಾ ಫರ್ನಾಂಡಿಸ್, ಪುಷ್ಪಾವತಿ, ರಾಧಾ ಸುಂದರೇಶ್ ಉಪಸ್ಥಿತರಿದ್ದರು.
