ಚಿಕ್ಕಮಗಳೂರು: ರಾಜ್ಯದಲ್ಲಿ ಭಾರತೀಯ ಜನತಾಪಾರ್ಟಿ ಇಷ್ಟು ವರ್ಷಗಳ ಕಾಲ ಧರ್ಮ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿ ಮಾಡಿ ಮನುಷ್ಯ ವಿರೋಧಿ ನಡೆಯನ್ನು ಅನುಸರಿಸುತ್ತಾ ಸನಾತನ ವಿಚಾರಗಳನ್ನು ಮೇಲು ಮಾಡುತ್ತಾ, ಮೇಲು-ಕೀಳು ಎನ್ನುವ ಭಾವವನ್ನ ಪರೋಕ್ಷವಾಗಿ ಬಿತ್ತುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದು ಕೆಪಿಸಿಸಿ ವಕ್ತಾರರಾದ ರವೀಶ್ ಖ್ಯಾತನ ಬೀಡು ಹೇಳಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ತನ್ನದೇ ಆದ ಸಂವಿಧಾನವನ್ನು ಹೊಂದಿ ಸರ್ವಧರ್ಮ ಸರ್ವ ಜಾತಿ ಮೇಲು ಕೀಳು ಇಲ್ಲದ ಸಮ ಸಮಾಜದ ಪರಿಕಲ್ಪನೆಯಡಿ ಕೆಲಸ ಮಾಡಬೇಕಿದೆ. ಇಲ್ಲಿ ಎಲ್ಲರೂ ಸಮಾನರು. ಆದರೆ ಬಿಜೆಪಿ ಯಾವ ನಡವಳಿಕೆಯನ್ನು ಅನುಸರಿಸದೆ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಿಸದೆ ರಾಜಕಾರಣ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನಡೆ ಎಂದರು.
ಬಿಜೆಪಿ ಪಕ್ಷದ ಮುಖಂಡರಾದ ಸಿ.ಟಿ .ರವಿ ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಲೇ ಒಂದೇ ಜಾತಿಯ ಜನರನ್ನು ಹೊಡೆದು ಹಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರೇಮಗಳೂರು ರಾಮಚಂದ್ರ, ತನೋಜ್ ನಾಯ್ಡು, ದೇವಪ್ಪ, ಶಾಂತಕುಮಾರ್, ಕಾಂತರಾಜ್ ಅರಸ್, ಉಪಸ್ಥಿತರಿದ್ದರು.
