Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಡಿ.ಎನ್. ಜೀವರಾಜ್ ಅವರ ಆದರ್ಶ ರಾಜಕೀಯ ನಡೆ: ಡಿಸಿಸಿ ಬ್ಯಾಂಕ್ ಸ್ಪರ್ಧೆಗೆ ನಿರಾಕರಣೆ

ಚಿಕ್ಕಮಗಳೂರು: ಡಿ.ಎನ್. ಜೀವರಾಜ್ ಅವರ ಆದರ್ಶ ರಾಜಕೀಯ ನಡೆ: ಡಿಸಿಸಿ ಬ್ಯಾಂಕ್ ಸ್ಪರ್ಧೆಗೆ ನಿರಾಕರಣೆ

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಡಿ.ಎನ್. ಜೀವರಾಜ್ ಅವರಿಗೆ ಪ್ರಸ್ತುತ ಯಾವುದೇ ಸರ್ಕಾರಿ ಅಥವಾ ಪಕ್ಷದ ಹುದ್ದೆ ಇಲ್ಲದ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ನಾಯಕತ್ವವು ಅವರನ್ನು ನರಸಿಂಹರಾಜಪುರ TAPCMS ಮೂಲಕ ಕೊಪ್ ಮಾಡಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿ ನಂತರ ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾವನೆ ನೀಡಿತ್ತು ಎನ್ನಲಾಗಿದೆ.

ಆದರೆ ಈ ಆಫರ್‌ಗೆ ಪ್ರತಿಕ್ರಿಯಿಸಿದ ಡಿ.ಎನ್. ಜೀವರಾಜ್ ಅವರು, ಪಕ್ಷದ ಮೇಲಿನ ನಿಷ್ಠೆ ಹಾಗೂ ಕಾರ್ಯಕರ್ತರ ಮೇಲಿನ ಗೌರವವನ್ನು ಮುಂದಿಟ್ಟು, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಜೀವರಾಜ್ ಅವರು,
“ಪಕ್ಷ ನನಗೆ ಸಚಿವ ಸ್ಥಾನ ನೀಡಿದೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ಕೊಟ್ಟಿದೆ. ಈಗ ಪಕ್ಷದ ಕಾರ್ಯಕರ್ತರಿಗೆ ಸ್ಪರ್ಧೆ ಮಾಡುವ ಅವಕಾಶ ನೀಡುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪದವಿ ಮತ್ತು ಅಧಿಕಾರಕ್ಕಿಂತ ಪಕ್ಷದ ತತ್ವ, ಶಿಸ್ತು ಹಾಗೂ ಕಾರ್ಯಕರ್ತರ ಭವಿಷ್ಯ ಮುಖ್ಯ ಎಂಬುದನ್ನು ತಮ್ಮ ನಡೆ ಮೂಲಕ ಜೀವರಾಜ್ ಅವರು ತೋರಿಸಿದ್ದಾರೆ. ಸ್ವಂತ ಅವಕಾಶವನ್ನು ತ್ಯಾಗ ಮಾಡಿ ಕಾರ್ಯಕರ್ತರಿಗೆ ದಾರಿ ಮಾಡಿಕೊಟ್ಟಿರುವುದು ರಾಜಕೀಯ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಈ ನಿರ್ಧಾರದಿಂದ ಡಿ.ಎನ್. ಜೀವರಾಜ್ ಅವರು ಕೇವಲ ಅನುಭವಿ ನಾಯಕ ಮಾತ್ರವಲ್ಲ, ಆದರ್ಶ ರಾಜಕಾರಣಿಯೆಂಬ ಸಂದೇಶವನ್ನು ಮತ್ತೊಮ್ಮೆ ರವಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!