Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ದತ್ತಜಯಂತಿ ಸಂಭ್ರಮ: ಶಾಂತಿಯುತವಾಗಿ ಶೋಭಾಯಾತ್ರೆಗೆ ತೆರೆ!

ಚಿಕ್ಕಮಗಳೂರು: ದತ್ತಜಯಂತಿ ಸಂಭ್ರಮ: ಶಾಂತಿಯುತವಾಗಿ ಶೋಭಾಯಾತ್ರೆಗೆ ತೆರೆ!

ಚಿಕ್ಕಮಗಳೂರು: ಆರು ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲು. 10 ಡ್ರೋನಿನ ಹದ್ದಿನ ಕಣ್ಣು. ಡಿಜೆ ಸೌಂಡ್‌ಗೆ ಐದು ಗಂಟೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು. ವಿವಿಧ ಕಲಾತಂಡದೊಂದಿಗೆ ಸಾಗಿದ ದತ್ತ ಜಯಂತಿಯ ಎರಡನೇ ದಿನ ಶೋಭಾಯಾತ್ರೆ ಶಾಂತಿಯುತವಾಗಿ ತೆರೆಬಿದ್ದಿದೆ.

ಇನಾಂ ದತ್ತಾತ್ರೇಯ ಪೀಠದಲ್ಲಿ ವಿಎಚ್‌ಪಿ, ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿ ಅಂಗವಾಗಿ ಎರಡನೇ ದಿನ ಅದ್ದೂರಿಯಾಗಿ ಬೃಹತ್ ಶೋಭಾಯಾತ್ರೆ ನಡೆಯಿತು. ನಗರದ ಕಾಮಧೇನು ಮಹಾಗಣಪತಿ ದೇವಸ್ಥಾನದಲ್ಲಿ ಟ್ರಾಕ್ಟರ್‌ನಲ್ಲಿ ಕುಳ್ಳಿರಿಸಿದ್ದ ದತ್ತಾತ್ರೇಯ ದೇವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಹಳ್ಳಿ ವಾದ್ಯಕ್ಕೆ ಸಿ.ಟಿ.ರವಿ ಹಾಗೂ ಹಲವರು ಫುಲ್ ಡಾನ್ಸ್ ಮಾಡಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಡಿಜೆ ಸೌಂಡ್ಸ್ ಏರ್ಪಡಿಸಲಾಗಿತ್ತು. ಹನುಮಂತಪ್ಪ ವೃತ್ತಕ್ಕೆ ಆಗಮಿಸ್ತಿದ್ದಂತೆ ಕಲರ್-ಕಲರ್ ದೀಪಕ್ಕೆ ಯುವಕ-ಯುವತಿಯರು ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು.

ಸುಮಾರು 15 ಸಾವಿರ ಮಂದಿ ಭಾಗಿಯಾಗಿದ್ದ ಶೋಭಾಯಾತ್ರೆಯ ಬಳಿಕ ಆಜಾದ್ ಪಾರ್ಕ್‌ನಲ್ಲಿ ಧಾರ್ಮಿಕ ಸಭೆ ನಡೆಯಿತು. ಶೋಭಾಯಾತ್ರೆ ಶಾಂತಿಯುತವಾಗಿ ಮುಗಿದಿದ್ದು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!