Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: DCC ಬ್ಯಾಂಕ್ ಚುನಾವಣೆ: ನಿರ್ದೇಶಕ ಸ್ಥಾನಕ್ಕೆ ಸಿ.ಟಿ. ರವಿ & ಎಸ್. ಎಲ್. ಭೋಜೇಗೌಡ...

ಚಿಕ್ಕಮಗಳೂರು: DCC ಬ್ಯಾಂಕ್ ಚುನಾವಣೆ: ನಿರ್ದೇಶಕ ಸ್ಥಾನಕ್ಕೆ ಸಿ.ಟಿ. ರವಿ & ಎಸ್. ಎಲ್. ಭೋಜೇಗೌಡ ನೇರಾನೇರ ಸ್ಪರ್ಧೆ!

ಚಿಕ್ಕಮಗಳೂರು: ಕಳೆದ ಐದು ವರ್ಷದ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಹಾವು ಮುಂಗುಸಿಯಂತಿದ್ದ ಸಿ.ಟಿ. ರವಿ ಮತ್ತು ಎಸ್. ಎಲ್. ಭೋಜೇಗೌಡ ಇಬ್ಬರೂ ಈ ಬಾರಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಸಿ.ಟಿ ರವಿ ಮತ್ತು ಎಸ್. ಎಲ್. ಭೋಜೇಗೌಡ ನಡುವೆ ನೇರ ಫೈಟಿಂಗ್ ನಡೆದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಎಚ್. ಡಿ. ತಮ್ಮಯ್ಯನವರನ್ನು ಬೆಂಬಲಿಸುವ ಮೂಲಕ ಭೋಜೇಗೌಡ ಸಿ. ಟಿ .ರವಿ ವಿರುದ್ಧ ಸೇಡು ತೀರಿಸಿಕೊಂಡಿದ್ದರು.


13 ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ  ಬಿಜೆಪಿ -ಜೆಡಿಎಸ್ ಮೈತ್ರಿಕೂಟದ ತಲಾ 11 ಮತ್ತು 2 ಅಭ್ಯರ್ಥಿಗಳು ಅಖಾಡಕ್ಕೆ ಇಳಿಯಲಿದ್ದಾರೆ. ಇದರಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ. ಟಿ. ರವಿ ಮತ್ತು ಎಸ್. ಎಲ್ .ಭೋಜೆಗೌಡ ಹಾಗೂ ಧರ್ಮೇಗೌಡರ ಪುತ್ರ ಸೋನಾಲ್ ಪ್ರಮುಖರು.

ಪಕ್ಷ ಹಾಗೂ ನಿರ್ದೇಶಕರ ಆಶಯದಂತೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿರುವ ಸಿ.ಟಿ. ರವಿ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಉಭಯ ಪಕ್ಷಗಳ ಮೈತ್ರಿ ಜಿಲ್ಲೆಯಲ್ಲಿ  ಮುಂದುವರೆಯಲಿದ್ದು,  ಸ್ಥಳೀಯ ಸಂಸ್ಥೆಗಳಲ್ಲಿ ಕೆಲವೆಡೆ ಫ್ರೆಂಡ್ಲಿ ಫೈಟ್ ಸಾಧ್ಯತೆ ಇದೆ ಎಂದು.

ಎರಡು ಪಕ್ಷಗಳ ಮೈತ್ರಿ ಜಿಲ್ಲೆಯಲ್ಲಿ ಅಬಾಧಿತ ಎಂದಿರುವ ಎಸ್. ಎಲ್ ಭೋಜೇಗೌಡ ಸಹಕಾರ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸ್ಥಳೀಯ ಮಟ್ಟದಲ್ಲಿ ನಿರ್ದೇಶಕರಾಗಿರುವುದು ಅನಿವಾರ್ಯ ಎಂದಿದ್ದಾರೆ.
ಕಾರ್ಯಕರ್ತರಿಗೆ ಕೊಡಬಹುದಾಗಿದ್ದ ಅವಕಾಶವನ್ನು ಉಭಯ ನಾಯಕರು ಕಿತ್ತುಕೊಂಡಿದ್ದಾರೆ ಎನ್ನುವ ಆರೋಪವು ಕೇಳಿ ಬಂದಿದೆ.ಡಿಸಿಸಿ ಬ್ಯಾಂಕಿನ ಸದ್ಯದ ಸ್ಥಿತಿ ಹೊರಗೆ ಥಳಕು ಒಳಗೆ ಹುಳುಕು ಎನ್ನುವಂತಾಗಿದೆ

ಸ್ವಜನ ಪಕ್ಷಪಾತ, ಜಾತಿ ರಾಜಕಾರಣ, ಅನಗತ್ಯ ದುಂದು ವೆಚ್ಚ, ನೇಮಕಾತಿ -ಬಡ್ತಿ  ನೀಡಿಕೆಯಲ್ಲಿ ಭ್ರಷ್ಟಾಚಾರ ಹೀಗೆ ಹಲವಾರು ಆರೋಪಗಳಿಂದ ಕೊಳೆತು ನಾರುತ್ತಿರುವ ಡಿಸಿಸಿ ಬ್ಯಾಂಕ್ ಗೆ ಹೊಸದಾಗಿ ಆಯ್ಕೆಯಾಗುವ ಆಡಳಿತ ಮಂಡಳಿ ಕಾಯಕಲ್ಪ ನೀಡುವುದೇ ಅಥವಾ ಮತ್ತಷ್ಟು ಕೊಳೆತುನಾರುವಂತೆ ಮಾಡುವುದೇ ಕಾದು ನೋಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!