Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಶೃಂಗೇರಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿ ಸಂತ್ರಸ್ತರಿಗೆ ಪರಿಹಾರ ಕ್ರಮಕ್ಕೆ ಮನವಿ!

ಚಿಕ್ಕಮಗಳೂರು: ಶೃಂಗೇರಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿ ಸಂತ್ರಸ್ತರಿಗೆ ಪರಿಹಾರ ಕ್ರಮಕ್ಕೆ ಮನವಿ!

ಚಿಕ್ಕಮಗಳೂರು: ಶೃಂಗೇರಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿಯವರನ್ನು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಭೇಟಿ ಮಾಡಿದರು.

ಈ ವೇಳೆ ಮಾತನಾಡಿದ ಸುಧಾಕರ್ ಶೆಟ್ಟಿಯವರು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕಾರ್ಕಳ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಸರ್ಕಾರದಿಂದ ಪ್ರಕಟಿಸಿರುವ ಪುನರ್ವಸತಿ ಮತ್ತು ಪರಿಹಾರ ಸುತ್ತೋಲೆ (ಆದೇಶ ಸಂಖ್ಯೆ ಖಆ-26-ಖಇಊ-2003, ದಿನಾಂಕ 18-04-2025) ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 20 ವರ್ಷಗಳ ಹಳೆಯ ಎಸ್.ಆರ್ ದರದ ಮೇರೆಗೆ ನೀಡಲಾಗುತ್ತಿರುವ ಪರಿಹಾರದಿಂದ ಜನರು ಹೊಸ ಜೀವನ ಆರಂಭಿಸಲು ಅಸಾಧ್ಯವಾಗಿರುವುದನ್ನು ಅವರು ಹೇಳಿದರು.

ಹಣದುಬ್ಬರದಿಂದ ಭೂಮಿ, ಮನೆ, ಸರಕು ಸೇವೆಗಳ ಬೆಲೆಗಳು ಅನೇಕ ಪಟ್ಟು ಏರಿರುವ ಪರಿಸ್ಥಿತಿಯಲ್ಲಿ 2005ರ ದರದ ಆಧಾರದಲ್ಲಿ ಹಣ ನೀಡುವುದು ಅನ್ಯಾಯ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರದ ಪುನರ್ವಸತಿ ಯೋಜನೆ ಅಡಿ ನೀಡುವ ಮೊತ್ತದಿಂದ ಜನರು ಹೊಸ ಜಾಗ ಅಥವಾ ಮನೆ ಖರೀದಿಸಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ.

ಆದ್ದರಿಂದ 2005ರ ಪ್ಯಾಕೇಜ್‌ನ ಮೌಲ್ಯಗಳನ್ನು 2025ರ ಮಾರ್ಕೆಟ್ ದರಕ್ಕೆ ಹೋಲಿಸಿ ತಕ್ಷಣ ಪುನರ್ ಪರಿಶೀಲನೆ ನಡೆಸಿ ಹೊಸ ಆದೇಶ ನೀಡುವಂತೆ ಸನ್ಮಾನ್ಯ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಸಲ್ಲಿಸಲಾಯಿತು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!