ಚಿಕ್ಕಮಗಳೂರು ನಗರದ ಡಿಸಿ ಕಚೇರಿಯಲ್ಲಿ ಪತ್ರಿಕಾ ಬಳಗದವರು ಸೇರಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಎನ್. ಎಂ ನಾಗರಾಜ ಅವರಿಂದ ಈದಿನ.ಕಾಮ್ ವತಿಯಿಂದ “ಜೈ ಹಿಂದ್ ಜಯ ಕರ್ನಾಟಕ” ವಾರ್ಷಿಕ ವಿಶೇಷ ಸಂಚಿಕೆಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ಭಾರತ ರಾಷ್ಟ್ರವಾದ ಮತ್ತು ಕರ್ನಾಟಕತ್ವಗಳ ವಿಶೇಷ ವಿಕಾಸದ ಕಥನಗಳ ಕುರಿತು ಬರವಣಿಗೆ ಮೂಡಿ ಬಂದಿದೆ.
“ಜೈ ಹಿಂದ್” ಎಂಬ ಪದ ಕೇಳಿದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರ ಒಡಲೊಳಗೊಂದು ಕಂಪನ ಶುರುವಾಗುತ್ತಿತ್ತೋ, ದೇಶಪ್ರೇಮದ ಕಿಡಿಯೊಂದು ದೇಹಸಂಚಾರ ಮಾಡಿ ಹೊಸ ಚೈತನ್ಯ ತುಂಬಿಕೊಳ್ಳುತ್ತಿತ್ತೋ ಅದೇ ‘ಜೈ ಹಿಂದ್’.! ಸ್ವಾತಂತ್ರ್ಯ ಹೋರಾಟದ ಆರಂಭಿಕ ದಿನಗಳಲ್ಲಿ ಮೊಳಗಲು ಶುರುವಾದ ‘ಜೈ ಹಿಂದ್’ ಘೋಷ ಇಂದು ಚಿಕ್ಕ ಶಾಲಾ ಕಾರ್ಯಕ್ರಮಗಳಿಂದ ಹಿಡಿದು ಈ ದೇಶದ ಸೇನೆಯವರೆಗೆ, ಕ್ರೀಡಾ ಕ್ಷೇತ್ರಗಳಿಂದ ಹಿಡಿದು, ರಾಜಕೀಯದವರೆಗೆ ಎಲ್ಲೆಡೆ ಮೊಳಗುತ್ತದೆ.

ಜೈ ಹಿಂದ್ ಘೋಷಣೆಯನ್ನು ಚಂಪಕರಾಮನ್ ಪಿಳ್ಳೆ ರಚಿಸಿದ್ದಾರೆ, ನೇತಾಜಿ ಸುಭಾಷ್ ಚಂದ್ರ ಬೋಸ್ ವಿರಚಿತ ಎಂದೆಲ್ಲ ಕೇಳಿದ್ದೇವೆ. ಮಾಜಿ ಆಡಳಿತಾಧಿಕಾರಿ ಮತ್ತು ಅಂಕಣಕಾರ ನರೇಂದ್ರ ಲೂಥರ್ ತಮ್ಮ “ಲೆಜೆಂಡ್ಸ್ ಆಫ್ ಹೈದರಾಬಾದ್” ಪುಸ್ತಕದಲ್ಲಿ ಈ ಘೋಷಣೆಯನ್ನು ಹೈದರಾಬಾದಿ ಯುವಕ ಜೈನ್-ಉಲ್-ಅಬಿದ್ ಹಸನ್ ‘ಸಫ್ರಾನಿ’ ಎಂಬ ಯುವಕ ಈ ಘೋಷಣೆ ಕೂಗಿರುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇನ್ನು ಅನೇಕ ಹಿರಿಯ ಹೋರಾಟಗಾರರು ನಾಡಿಗಾಗಿ ಶ್ರಮ ಪಟ್ಟಿರುವ ಇತಿಹಾಸ ಈ ಸಂಚಿಕೆಯಲ್ಲಿ ರೂಪಗೊಂಡಿದೆ.
ಈ ವೇಳೆ ಪತ್ರಕರ್ತ ಸಂಘದ ಅಧ್ಯಕ್ಷರು ಚಂದ್ರೆಗೌಡರು, ವಿಜಯ ಕರ್ನಾಟಕ ವರದಿಗಾರರು ರುದ್ರಯ್ಯ, ಹೊಸ ದಿಗಂತ ಪತ್ರಿಕೆಯ ವರದಿಗಾರರು ಸುರೇಶ್, ಈದಿನ. ಕಾಮ್ ಜಿಲ್ಲಾ ಪತ್ರಕರ್ತೆ ಗಿರಿಜಾ ಎಸ್. ಜಿ, ಚಂದ್ರಯ್ಯ, ಪ್ರವೀಣ್ ಹಾಗೂ ಇನ್ನಿತರ ಸ್ನೇಹಿತರು ಉಪಸ್ಥಿತರಿದ್ದರು.
