Thursday, March 26, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಬೆಟ್ಟದಿಂದಿಳಿದು ಗಾಳಿ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವೀರಮ್ಮ: Video Viral

ಚಿಕ್ಕಮಗಳೂರು: ಬೆಟ್ಟದಿಂದಿಳಿದು ಗಾಳಿ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವೀರಮ್ಮ: Video Viral

ಚಿಕ್ಕಮಗಳೂರು : ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವಿರಮ್ಮ ಮಂಗಳವಾರ ಗಾಳಿಯ ರೂಪದಲ್ಲಿ ಗರ್ಭಗುಡಿಯನ್ನು ಪ್ರವೇಶಿಸುವ ಪವಾಡ ಸದೃಶ್ಯವನ್ನು ನಾವಿಲ್ಲಿ ಕಾಣಬಹುದು.

ಹೌದು .. ದೀಪಾವಳಿ ಸಂದರ್ಭದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮ ಉಳಿದ 364 ದಿನ ದೇವಸ್ಥಾನದಲ್ಲಿ ಭಕ್ತರಿಗೆ‌ ದರ್ಶನ ನೀಡುವ ತಾಯಿ. ಇಂದು ದೇವಸ್ಥಾನ ಪ್ರವೇಶಿಸುವ ಸಂಪ್ರದಾಯ ನಡೆದಿದ್ದು ತಾಯಿ ಗಾಳಿ ರೂಪದಲ್ಲಿ ದೇವಸ್ಥಾನ ಸೇರಿರುತ್ತಾಳೆ.ಈ ವಿಶಿಷ್ಠ ಪವಾಡವನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದು ಕಣ್ತುಂಬಿಕೊಂಡರು.

ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ದೇವಸ್ಥಾನ‌ ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ದೇವೀರಮ್ಮ‌ ಎರಡು ದಿನದಿಂದ ಬೆಟ್ಟದ ಮೇಲಿದ್ದ ದೇವಿ ಇಂದು ಕೆಳಗಿರುವ ದೇಗುಲದ ಗರ್ಭಗುಡಿ ಪ್ರವೇಶ ಈ ಬಾರಿ ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು. ಈ ಎರಡು ದಿನದಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟವನ್ನೇರಿದ್ರು‌ ಬರೀಗಾಲಿನಲ್ಲಿ ಬೆಟ್ಟವನ್ನೇರಿ ದರ್ಶನ ಪಡೆದಿದ್ದ ಸಾವಿರಾರು ಭಕ್ತರು‌

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!