ಚಿಕ್ಕಮಗಳೂರು: ಜಿಲ್ಲೆಗೆ ಉಪ ಲೋಕಯುಕ್ತ ಕೆ.ಎನ್ ಫಣೀಂದ್ರ ಮೂರು ದಿನಗಳ ಭೇಟಿ ಎಷ್ಟು ಫಲಭದ್ರವಾಯಿತು ಎಂಬ ಚರ್ಚೆ ನಡೆಯುತ್ತಿದೆ.
ಸಾರ್ವಜನಿಕರು ಮತ್ತು ಮಾಹಿತಿ ಹಕ್ಕುಗಳ ಕಾರ್ಯಕರ್ತರಿಂದ ದೂರುಅರ್ಜಿ ಸ್ವೀಕರಿಸಿ ಕೆಲವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನವಂತೂ ನಡೆಯಿತು.ಇನ್ನೂ ಕೆಲವು ದೂರುಗಳ ಬಗ್ಗೆ ಕಾಲ ಮಿತಿ ನೀಡಿ ಹೋಗಿದ್ದಾರೆ.
ಕೆಲವರಿಗೆ ಚಳಿ ಬಿಡಿಸಿದ್ದಾರೆ ಸದ್ಯ ಬಚಾವ್ ಆದೆವು ಎಂದು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಕೆಲವರು ಬೆಟ್ಟ ಅಗೆದು ಇಲಿ ಹಿಡಿದುಕೊಂಡು ಹೋದರು ಎಂದು ಮುಸಿ,ಮುಸಿ ನಗುತ್ತಾ ಮಾತನಾಡುತ್ತಿದ್ದಾರೆ.
ಆಸ್ಪತ್ರೆ ಮತ್ತು ನಗರ ಸಭೆಗೆ ಧಿಡೀರ್ ಭೇಟಿ ನೀಡಿ ಮೈ ಚಳಿ ಬಿಡಿಸಿ ಕಾಲಮಿತಿ ನೀಡಿರುವುದು ಕೊಳೆತ ಮನಸ್ಸುಗಳಿಗೆ ಇದು ಮಾಮುಲಿ ಎನ್ನುವಂತಾಗಿದೆ.
ಭ್ರಷ್ಟ ಅಧಿಕಾರಿಗಳ ಉಸ್ತುವಾರಿ ನೋಡಿ ಇದು ಬೇಕಿತ್ತಾ ಎಂದು ಸಾಮಾಜಿಕ ಕಾರ್ಯಕರ್ತರ ಅಳಲು ಇನ್ನಷ್ಟು ಕ್ರಮ ಜರುಗಿಸಿ ಭ್ರಷ್ಟ ಅಧಿಕಾರಿಗಳಿಗೆ ಬರೆ ಹಾಕ ಬೇಕಿತ್ತು ಇಂತಹ ಯಾವುದೇ ಕ್ರಮ ಆಗದಿರುವುದು ಪ್ರಯೋಜನ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೂರು ದಿನ ಜಿಲ್ಲೆಯ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿ ವರ್ಗದವರು ಫೈಲ್ ಹಿಡಿದುಕೊಂಡು ಹಬ್ಬ ಜಾತ್ರೆಗೆ ಬಂದು ಹೋದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಪ ಲೋಕಾಯುಕ್ತರ ಭೇಟಿಯಿಂದ ಮೈ ಚಳಿ ಬಿಡಿಸಿದರೆ ಸಾಕಾಗುವುದಿಲ್ಲ ಇನ್ನಷ್ಟು ಕ್ರಮವಾಗಬೇಕಿತ್ತು ನಿಜ ಆದರೆ ಅವರ ಇತಿ ಮಿತಿಯನ್ನು ಅರಿಯ ಬೇಕು ನಿಜ ದಡ್ಡುಗಟ್ಟಿರುವ ಚರ್ಮದ ವರಿಗೆ ಇಷ್ಟೇನಾ ಎನ್ನಿಸುವಂತಾಯಿತು.
ಕಂದಾಯ ಇಲಾಖೆ ,ನಗರ ಸಭೆ, ಪುರಸಭೆಗಳು, ಇಂಜಿನಿಯರಿಂಗ್ ಇಲಾಖೆಗಳು ಆಸ್ಪತ್ರೆಗಳು ಮತ್ತು ಗಣಿ ಇಲಾಖೆಯಲ್ಲಿ ಯಮದೂತ ಬಂದರು ಭ್ರಷ್ಟಚಾರ ನಿಲ್ಲಿಸಲು ಸಾಧ್ಯವಿಲ್ಲ. ತಾತ್ಕಾಲಿಕ ಭಯ ಬಂದಿರಬಹುದು.
ಗಣಿಗಾರಿಕೆ ನಡೆಸುವರು ಹಗಲು ರಾತ್ರಿ ಕೊಳ್ಳೆ ಹೊಡೆಯುತ್ತಿದ್ದಾರೆ ಕ್ವಾರಿಗಳಿಗೆ ಭೇಟಿ ನೀಡಬಹುದಿತ್ತು .ಕಂದಾಯ ಇಲಾಖೆಯಲ್ಲಿ ಕಾಡಿನ ಜಾಗಕ್ಕೆ ಬಗರ್ ಹುಕಂ ಸಾಗುವಳಿ ನೀಡಿದ್ದಾರೆ ಜಿಲ್ಲೆಯಲ್ಲಿ ಇದು ದೊಡ್ಡ ಸಮಸ್ಯೆ ಇದರ ಬಗ್ಗೆ ಗಮನಹರಿಸ ಬೇಕಿತ್ತು ಇನ್ನೂ ಪ್ರವಾಸೋದ್ಯಮದ ಹೆಸರಿನಲ್ಲಿ ಕಾನೂನು ಮೀರಿ ಆಕ್ರಮವಾಗಿ ರೆಸಾರ್ಟ್ಸ್ ಮತ್ತು ಹೋಮ್ ಸ್ಟೇಗಳ ಮತ್ತು ರಸ್ತೆ ನಿರ್ಮಾಣ ಮಾಡಿರುವ ಬಗ್ಗೆ ನಿಗವಹಿಸಿ ಕ್ರಮ ಕೈಗೊಳ್ಳ ಬೇಕಿತ್ತು ಕಾನೂನು ನಿಯಮಗಳನ್ನು ಮೀರಿದವರಿಗೆ ಕ್ರಮ ಕೈಗೊಳ್ಳ ಬೇಕಿತ್ತು. ಗಣಿಗಾರಿಕೆಯನ್ನು ನಡೆಸುತ್ತಿರುವವರು ರಾಜಕಾರಣಿಗಳು ಮತ್ತು ಹಣವಂತರು ಇಂತವರ ವಿರುದ್ಧ ಕ್ರಮವಾಗಿದ್ದರೆ ಲೋಕಯುಕ್ತದವರ ಬಗ್ಗೆ ಗೌರವ ನಂಬಿಕೆ ಹೆಚ್ಚುತಿತ್ತು .
ಭ್ರಷ್ಟರು ಭಂಡತನ ಮೈಗೂಡಿಸಿಕೊಂಡಿದ್ದವರಿಗೆ ಕಳೆದ ಒಂದು ವಾರದಿಂದ ನಡುಕ ಬಂದಿತ್ತು ನಿಜ ಇದರ ಫಲವಾಗಿ ಲೋಕಯುಕ್ತದವರ ಓಡಾಡುವ ರಸ್ತೆಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಿ ಕೊಂಡವು ಜೊತೆಗೆ ಪ್ರವಾಸಿ ಮಂದಿರದಲ್ಲಿ ಕೆಟ್ಟು ಹೋಗಿದ್ದ ಲೈಟ್ ಗಳು ಜಗ ಮಗಿಸಿದರೆ, ಸುಣ್ಣ ಬಣ್ಣ ಬಳಿಸಿ ಕೊಂಡು ಹೊಳೆಯುವಂತಾಯಿತು.ತಾತ್ಕಾಲಿಕ ಸಿ.ಸಿ ಕ್ಯಾಮೆರಾಗಳು ಬಂದು ಹೋದವು ಭರ್ಜರಿ ಭೋಜನಾ ವ್ಯವಸ್ಥೆ ಮಧ್ಯೆ ಕಾನೂನು ಅರಿವು ಮೂಡಿಸುವ ಪ್ರಯತ್ನ ಸಮಾಧಾನ ತಂದವು ಎಂದು ಪಿಸುಗುಟ್ಟುತ್ತಿದ್ದಾರೆ.
