Monday, March 16, 2026
Homeಕ್ರೈಮ್ಚಿಕ್ಕಮಗಳೂರು: ಆನ್‌ ಲೈನ್‌ ಟ್ರೇಡಿಂಗ್‌ ನೆಪದಲ್ಲಿ ಬಲೆಗೆ ಬಿದ್ದ ವೈದ್ಯ: ಲಕ್ಷಾಂತರ ರೂಪಾಯಿ ವಂಚನೆ!

ಚಿಕ್ಕಮಗಳೂರು: ಆನ್‌ ಲೈನ್‌ ಟ್ರೇಡಿಂಗ್‌ ನೆಪದಲ್ಲಿ ಬಲೆಗೆ ಬಿದ್ದ ವೈದ್ಯ: ಲಕ್ಷಾಂತರ ರೂಪಾಯಿ ವಂಚನೆ!

ಚಿಕ್ಕಮಗಳೂರು: ಆನ್‌ ಲೈನ್‌ ಟ್ರೇಡಿಂಗ್‌ ನೆಪದಲ್ಲಿ ವೈದ್ಯರೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರು ಕಳೆದ ಮೂರು ವರ್ಷಗಳಿಂದ ಆನ್‌ಲೈನ್ ಟ್ರೇಡಿಂಗ್ ಮಾಡುತ್ತಿದ್ದು, USDT ಖರೀದಿಸಲು P2P ಮೂಲಕ APP ನಲ್ಲಿ 16934 ಎಂಬ ಯೂಸರ್‌ನೆಮ್ ಹೊಂದಿದ್ದ ಅಶೋಕ್ ಮೀನಾ ಎಂಬ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಆತನ ಸೂಚನೆಯಂತೆ ದೂರುದಾರ 50,000 ರೂ.ಗಳನ್ನು ವರ್ಗಾವಣೆ ಮಾಡಿದ್ದು, ಬಳಿಕ SBI ಬ್ಯಾಂಕ್ ಖಾತೆಗೆ 51,000 ರೂ.ಗಳನ್ನು ಜಮಾ ಮಾಡಿದ್ದರು. ಆದರೆ ಹಣ ಸ್ವೀಕರಿಸಿದ ನಂತರ ಆರೋಪಿ USDT ನೀಡದೇ ಸಂಪರ್ಕದಿಂದ ತಪ್ಪಿಸಿಕೊಂಡಿದ್ದಾನೆ.

ಇದೇ ವೇಳೆ ವಾಟ್ಸ್‌ಆಪ್‌ನಲ್ಲಿ ದೂರುದಾರರನ್ನು ಬ್ಲಾಕ್ ಮಾಡಿರುವುದು ಕೂಡ ತಿಳಿದುಬಂದಿದೆ. ನಂತರ APP ನಲ್ಲಿ ORDER ಕೂಡ cancel ಆಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ: ಶಾಲಿನಿ ಪಿ.ಗೌಡ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!