Saturday, February 7, 2026
Homeಕ್ರೈಮ್ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು: ನಾಲ್ವರ ಸ್ಥಿತಿ ಗಂಭೀರ!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು: ನಾಲ್ವರ ಸ್ಥಿತಿ ಗಂಭೀರ!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಗುಂಡಿಗೆ ಉರುಳಿದ ಘಟನೆ ನಗರದ ಅಲ್ಲಂಪುರ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.

ಹೌದು .. ಚಿಕ್ಕಮಗಳೂರು ನಗರದಿಂದ ದಾಸರಹಳ್ಳಿ ಕಡೆ ಹೋಗುವ ದಾರಿ ಮಧ್ಯೆ ಅಲ್ಲಂ ಪುರ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಗುಂಡಿಗೆ ಉರುಳಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿವೆ.

ಅಪಘಾತ ಆದವರು ದಾಸರಹಳ್ಳಿ ನಿವಾಸಿಗಳಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಅಪಘಾತವಾದ ಸ್ಥಳದಲ್ಲಿ ಎರಡು ಕಡೆ ಟ್ರಾಫಿಕ್‌ ಜಾಮ್‌ ಆಗಿ ಗದ್ದಲ ಉಂಟಾಗಿದ್ದು ತದಾನಂತರ ಕಾರನ್ನು ಮೇಲಕ್ಕೆತ್ತಿದ ಮೇಲೆ ಟ್ರಾಫಿಕ್‌ ಕ್ಲಿಯರ್‌ ಆಗಿದೆ.

ಘಟನಾ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!