ಚಿಕ್ಕಮಗಳೂರು: ನಗರದ ಹೇಮಾಂಗಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇವರ ವತಿಯಿಂದ ನೂತನ ಚಿಕ್ಕಮಗಳೂರು ಘಟಕದ ಪದ ಪ್ರಧಾನ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ. ಟಿ. ರವಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಜೊತೆಗೆ ಕಲೆ, ಸಂಸ್ಕೃತಿ ಪೋಷಿಸಿ ಬೆಳೆಸುವ ಕಾರ್ಯವನ್ನು ರೂಡಿಗೊಳಿಸಿಕೊಳ್ಳಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿ ಕಾಯ್ದೆ ಕಡ್ಡಾಯ ಮಾಡಿದ ಪರಿಣಾಮ ಯುವ ಸಂಘಗಳು ಕ್ಷೀಣಿಸಿವೆ. ಸ್ಥಿರ ನಿಧಿಯನ್ನು ನೀಡದಿರುವ ಕಾರಣ ಸಂಘಗಳಿಗೆ ಯಾವ ಪ್ರಯೋಜನವಿಲ್ಲ, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.
ಕಲೆಯನ್ನೇ ಆರಾಧಿಸಿ ಬದುಕಿದ ಹಲವಾರು ಕಲಾವಿದರಿಗೆ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಕೂಡಲೇ ಇದರತ್ತ ಗಮನ ಹರಿಸಿ ಅವರ ವೃದ್ಧಾಪ್ಯ ಕಾಲದಲ್ಲಿ ಸರ್ಕಾರ ಮಾಶಾಸನ ನೀಡಿ ನೆರವಾಗಬೇಕು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ಯುವಜನ ಮೇಳಗಳು, ರಾಜ್ಯ ಜಿಲ್ಲಾ ಯುವ ಪ್ರಶಸ್ತಿಗಳು, ಯುವ ಸಂಪರ್ಕ ಸಭೆಗಳು, ಸಂಘಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಮಾಗ್ರಿಗಳ ಯೋಜನೆ, ಗರುಡಿ ಮನೆ ಉಪಕರಣಗಳು ನೀಡುವುದನ್ನು ಸರ್ಕಾರ ಪುನರಾರಂಭಿಸಬೇಕು ಎಂದರು.
ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಮಾತನಾಡಿ ಕನ್ನಡ ಮತ್ತು ಕರ್ನಾಟಕದ ಹಿರಿಮೆಯನ್ನು ಜಾಗೃತಿ ಮೂಡಿಸುವ ಕಾಲಘಟ್ಟಕ್ಕೆ ಬಂದಿದ್ದೇವೆ ಕನ್ನಡ ಎಂದಿಗೂ ಜೀವಂತವಾಗಿರಲಿದೆ ಎಂದರು.
ಇದೆ ವೇಳೆ ಯುವ ಸಾಧಕರಾದ ತಾಲೂಕಿನ ಯುವ ಸಂಘಟಕ ಹೇಮಂತ್ ಕುಮಾರ್ ಹಾಗೂ ಮೂಡಿಗೆರೆ ಯುವ ಕಲಾವಿದೆ ಶುಭಾ ಹೊಸಕೆರೆ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘಟನೆ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಾಂತಮೂರ್ತಿ, ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಗೌರವಾಧ್ಯಕ್ಷ ಎಸ್.ಎಸ್.ಶಿವಣ್ಣ, ಅಧ್ಯಕ್ಷ ಜಯಪ್ರಕಾಶ್, ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ, ಮೂಡಿಗೆರೆ ಅಧ್ಯಕ್ಷ ಹೆಚ್.ಎಸ್. ರವಿ, ಜನಪವ ಯುವ ಬ್ರಿಗೇಡ್ ಗ್ರಾಮೀಣ ಸಂಚಾಲಕ ದಿಲೀಪ್, ನಗರ ಸಂಚಾಲಕ ಅಮಿತ್, ಮುಖಂಡರುಗಳಾದ ಸುರೇಶ್, ಪವಿತ್ರಾ ವಿಜಯ್, ಶ್ರೀನಾಥ್, ಅಶ್ವಿನಿ,ಬಿ.ಜಿ.ಮಧು ಇದ್ದರು.
ಕಾರ್ಯಕ್ರಮದಲ್ಲಿ ಅಶ್ವಿನಿ ಹಾಗೂ ಪವಿತ್ರ ವಿಜಯ ರವರು ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದರು ಹಾಗೂ ವಿಜಯಲಕ್ಷ್ಮಿ ಅವರು ಸರ್ವರಿಗೂ ವಂದನಾರ್ಪಣೆ ಮಾಡಿದರು
