ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಬಾಲಕಿಯರ ಹಾಗೂ ಮಹಿಳೆಯರ ಹಾಸ್ಟೆಲ್ ಗಳಿಗೆ ಮಹಿಳಾ ಪಿಎಸ್ಐ ದರ್ಜೆಯ ನೋಡೆಲ್ ಅಧಿಕಾರಿಗಳು ಅನಿರೀಕ್ಷಿತವಾಗಿ ಭೇಟಿ ನೀಡಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ವಿಚಾರಗಳ ಬಗ್ಗೆ ಸಂವಾದ ನಡೆಸಿದರು.

ಹೌದು .. ಸೋಮವಾರ(ಜೂನ್ 14) ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ʼಆರಕ್ಷಕ ಗೆಳತಿʼ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್ಐ ದರ್ಜೆಯ ನೋಡೆಲ್ ಅಧಿಕಾರಿಗಳು ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿರುವ ಬಾಲಕಿಯರ ಹಾಗೂ ಮಹಿಳೆಯರು, ಅವರ ಪೋಷಕರು ಸೇರಿದಂತೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರೊಡನೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಆ ನಂತರ ಪೋಕ್ಸೋ, ಚೈಲ್ಡ್ ರೈಟ್ಸ್, ಚೈಲ್ಡ್ ಮ್ಯಾರೇಜ್, ಸೈಬರ್ ಕ್ರೈಮ್ಸ್, ಟ್ರಾಫಿಕ್ ರೂಲ್ಸ್, ಡ್ರಗ್ಸ್ ಇತ್ಯಾದಿ ವಿಷಯಗಳಲ್ಲಿ ಕಾನೂನು ಅರಿವು ಮೂಡಿಸಿ ಬಾಲಕಿಯರು ಮತ್ತು ಮಹಿಳೆಯರ ಮನೋಸ್ಥೆರ್ಯವನ್ನು ಸಹ ಹೆಚ್ಚಿಸಿದರು. ಅದು ಅಲ್ಲದೇ ಹಾಸ್ಟೆಲ್ ಕಟ್ಟಡಗಳ ಮೆಸ್, ಟೀಚಿಂಗ್ ರೂಂಗಳು, ಆವರಣ, ಕಟ್ಟಡಗಳ ಸ್ಥಿತಿಗತಿ, ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುವ ಬಗ್ಗೆ, ಕಾಂಪೌಂಡ್, ಸೆಕ್ಯೂರಿಟಿ ಗಾರ್ಡ್ಸ್ ಒಳಗೊಂಡಂತೆ ಭದ್ರತಾ ಹಿತ ದೃಷ್ಟಿಯಿಂದ ಪರಿಶೀಲಿಸಿದರು.

ಹಾಗೆ ಊಟ ತಿಂಡಿ ವಿತರಣೆ, ವಸತಿ ಸೌಕರ್ಯ, ಶೌಚಾಲಯಗಳಲ್ಲಿ ಸ್ವಚ್ಛತೆ, ಪೋಲಿ ಹುಡುಗರಿಂದ ಏನಾದರೂ ಕಿರಿಕಿರಿ, ತೊಂದರೆ, ಹಾಸ್ಟೆಲ್ ಅಕ್ಕ ಪಕ್ಕದ ವಾತಾವರಣ, ಮಕ್ಕಳಿಗೆ ಅನಾರೋಗ್ಯದ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ, ಬಾಲಕಿಯರ ಜೊತೆ ಹಾಸ್ಟೆಲ್ ಸಿಬ್ಬಂದಿಯವರ ವರ್ತನೆ ನಡತೆ ಕುರಿತು ಸಹ ಮಕ್ವಿಕಳ ಜೊತೆ ವಿಚಾರಿಸಿದರು.

ಆ ನಂತರ ಹಾಸ್ಟೆಲ್ ಮೇಲ್ವಿಚಾರಕರೊಂದಿಗೆ ಬಾಲಕಿಯರ ರೂಂಗಳನ್ನು ತಪಾಸಣೆ ಕೂಡ ನಡೆಸಿದರು. ಇದರ ಜೊತೆಗೆ ಮಕ್ಕಳೇನಾದರೂ ಚಾಕುಗಳು, ಕತ್ತರಿಗಳು ಇತರೆ ಕಬ್ಬಿಣದ ವಸ್ತುಗಳನ್ನ ಇಟ್ಟುಕೊಂಡಿದ್ದಾರಾ ಹಾಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ವೈದ್ಯರ ಸಲಹೆ ಹೊರತುಪಡಿಸಿ ಬೇರೆ ಯಾವುದಾದರೂ ಔಷದಿ ಮಾತ್ರೆಗಳು ಏನಾದರೂ ಇಟ್ಟುಕೊಂಡಿದ್ದಾರಾ ಎಂದು ವಿಚಾರಣೆ ನಡೆಸಿದರು, ಹಾಗೆ ಸ್ವಂತವಾಗಿ ಕುಕ್ಕಿಂಗ್ ಮಾಡುತ್ತಿದ್ದರೆ., ಹೊರಗಡೆಯಿಂದ ಪಾರ್ಸಲ್ಗಳನ್ನು ತರಿಸುತ್ತಿದ್ದರೆ ಇತ್ಯಾದಿಗಳನ್ನ ಪರಿಶೀಲಿಸಿ ಪ್ರಿನ್ಸಿಪಾಲ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಿರುತ್ತಾರೆ ಅಥವಾ ಇಲ್ವಾ ಎಂದು ವಿಚಾರಣೆ ನಡೆಸಿದರು.

ಆ ನಂತರ ಹಾಸ್ಟೆಲ್ಗಳಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಸಂಬಂಧಪಟ್ಟ ಪ್ರಿನ್ಸಿಪಾಲ್ ರವರಿಗೆ ಪತ್ರ ಬರೆದುಕೊಟ್ಟರು
ಸಹಾಯವಾಣಿ ಸಂಖ್ಯೆ ಈ ರೀತಿ ಇದೆ
ಎ) ಚೈಲ್ಡ್ ಹೆಲ್ಸ್ ಲೈನ್-1098
ಬಿ) ಇಆರ್ ಎಸ್ಎಸ್- 112.
ಸಿ) ವ್ಯಾಪ್ತಿಯ ಪೊಲೀಸ್ ಠಾಣೆ.
ಡಿ) ವ್ಯಾಪ್ತಿಯ ಪಿಎಸ್ಐ (ಕಾ&ಸು) ರವರ ನಂಬರ್.
ಇ) ಕಂಟ್ರೋಲ್ ರೂಂ- 9480805100