Friday, February 13, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಚಿಕ್ಕಮಗಳೂರು: ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಚಿಕ್ಕಮಗಳೂರು:  ತಾಲೂಕಿನ ಉದ್ದೆಬೋರನಹಳ್ಳಿ ವ್ಯಾಪ್ತಿಯ ಪಾದುಮನೆ ಗ್ರಾಮದಲ್ಲಿ ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಪುನುಗು ಬೆಕ್ಕು ಬೇಟೆಯಾಡಿ ಅದರ ಚರ್ಮ ಸುಲಿದು ಮಾಂಸ ತೆಗೆಯುವ ವೇಳೆಗೆ ಉಪ ವಲಯ ಅರಣ್ಯಾಧಿಕಾರಿ ನಾರಾಯಣ್ ಮತ್ತು ಸಿಬ್ಬಂದಿ ದಾಳಿ ಮಾಡಿ ರವಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ರವಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅನ್ವಯ ಪ್ರಕರಣ ದಾಖಲು ಮಾಡಿ, ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಗೀತ , ಮಧು, ಗಣೇಶ್, ಅಶೋಕ್, ನವೀನ್ ಕಾರ್ಯಾಚರಣೆ ನಡೆಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!