ಚಿಕ್ಕಮಗಳೂರು :ದೃಡೀಕರಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲೆಯ ಕಡೂರು ತಾಲೂಕಿನ ತಂಗ್ಲಿ ಗ್ರಾಮ ಪಂಚಾಯತಿಯ ಪಿಡಿಓ ನಂಜುಂಡಮ್ಮ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸರಸ್ವತಿಪುರದ ತಿಮ್ಮಶೆಟ್ಟಿ ಎಂಬುವವರಿಂದ ಸೈಟ್‌ಗೆ ದೃಢೀಕರಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲೇ 5 ಸಾವಿರ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
Follow the Public impact Media channel on WhatsApp: https://whatsapp.com/channel/0029VaAUBknChq6Ibwwvi12W
PUBLIC IMPACT CHANNEL’ನ ಪ್ರತಿಯೊಂದು ಸುದ್ದಿಗಳು ಇಲ್ಲಿ ಸಿಗುತ್ತದೆ. ಮೇಲಿನ ಲಿಂಕ್ ಮೂಲಕ ಜಾಯಿನ್ ಆಗಿ.
ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
