Monday, March 16, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು/ ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಆರ್ಭಟ: ಭಯದಿಂದಲೇ ಓಡಾಡುತ್ತಿರುವ ಜನ!

ಚಿಕ್ಕಮಗಳೂರು/ ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಆರ್ಭಟ: ಭಯದಿಂದಲೇ ಓಡಾಡುತ್ತಿರುವ ಜನ!

ಚಿಕ್ಕಮಗಳೂರು/ ಹಾಸನ: ಕಾಫಿತೋಟದ ಕಡೆ ಹೋಗ್ತಿದ್ರೆ ಎಚ್ಚರ.! ರಸ್ತೆಯಲ್ಲಿ ಓಡಾಡೂವಾಗಲೂ ಎಚ್ಚರ.! ಮನೆಯಂಗಳದಲ್ಲಿರುವಾಗಲೂ ಎಚ್ಚರ..! ಯಾವದಕ್ಕೂ ನೀವು ಇರಿ ಸ್ವಲ್ಪ ಎಚ್ಚರ.! ಯಾಕಪ್ಪಾ, ಈ ಎಚ್ಚರಿಕೆ ಅನ್ಕೊಂಡ್ರಾ.. ! ಕಾಫಿನಾಡಿಗೆ ಅತಿಥಿಗಳ ಆಗಮನವಾಗಿದೆ.. ಅತಿಥಿಗಳು ಬಂದ್ರೆ ನಾವ್ಯಾಕೆ ಎಚ್ಚರ ಆಗಿರಬೇಕು ಅಂತಾ ಕೇರ್ ಲೆಸ್ ಮಾಡಿದ್ರೆ, ನಮ್ ತಿಥಿ ಆದ್ರೂ ಆಗ್ಬಹುದು, ಅಚ್ಚರಿಪಡಬೇಕಿಲ್ಲ.! ಯಾಕಂದ್ರೆ ಬಂದಿರೋರು ಸಾಮಾನ್ಯ ಅತಿಥಿಗಳಲ್ಲ. ಅವರು ನಡೆದಿದ್ದೇ ದಾರಿ, ಆ ಅತಿಥಿಗಳು ಆಡಿದ್ದೇ ಆಟ.! ಅಷ್ಟಕ್ಕೂ ಹೇಗಿದೆ ಅವರ ಹವಾ ಅನ್ನೋದನ್ನ ಒಮ್ಮೆ ನೋಡಿ, ನಿಮ್ಗೆ ಗೊತ್ತಾಗುತ್ತೆ ಅವರುಗಳ ಆರ್ಭಟ..!


ಯೆಸ್.. ನೋಡಿದ್ರಾ..! ಒಂದ್ಕಡೆ ಕಾಫಿತೋಟಗಳು ಸರ್ವನಾಶ.. ಮತ್ತೊಂದೆಡೆ ತೋಟದ ಬೇಲಿಯೇ ಉಡೀಸ್..! ಇನ್ನೊಂದೆಡೆ ಮೋಟಾರ್, ಕಾರು ಎಲ್ಲವೂ ಪೀಸ್.. ಪೀಸ್..! ಹೀಗೆ ಎಲ್ಲವನ್ನೂ ಪುಡಿಗಟ್ಟಿ, ಬನ್ರಲ್ಲಾ.. ನಾವು ನಡಿದಿದ್ದೇ ದಾರಿ ಅಂತಾ ಹೋಗ್ತಿರೋ ಕಾಡಾನೆಗಳ ಹಿಂಡು.! ಇದೆಲ್ಲಾ ಕಂಡು ಬರ್ತಿರೋದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ, ಗೋಣಿಬೀಡು, ಕಸ್ಕೆಬೈಲ್, ಚಂದ್ರಾಪುರ, ಮಾಕೋನಹಳ್ಳಿ, ಕೊಲ್ಲಿಬೈಲ್ ಸೇರಿ ಮೂಡಿಗೆರೆಯ ಸುತ್ತಮುತ್ತ ಗ್ರಾಮಗಳಲ್ಲಿ. ಸದ್ಯ ಹಾಲಿಡೇ ಮೂಡ್ ನಲ್ಲಿರೋ ಗಜಪಡೆ ಗ್ಯಾಂಗ್, ಏನು ಅಂದ್ರೆ ಏನನ್ನೂ ಕೂಡ ಉಳಿಸ್ತಿಲ್ಲ. ಸಿಕ್ಕಿಸಿಕ್ಕಿದನ್ನೆಲ್ಲಾ ಉಡೀಸ್, ಪೀಸ್ ಪೀಸ್ ಮಾಡ್ತಾ ಇದ್ದಾವೆ. !

ಹೀಗೆ ಅಟ್ಟಹಾಸಗೈಯ್ತಾ ಇರೋದು ಒಂದೇ ಟೀಮಲ್ಲ, ಬದಲಾಗಿ ನಾಲ್ಕೆöÊದು ಟೀಂಗಳು.. ಒಂದ್ಕಡೆ ೧೫ಕ್ಕೂ ಹೆಚ್ಚು ಆನೆಗಳಿರೋ ಬೀಟಮ್ಮ ಗ್ಯಾಂಗ್, ಇನ್ನೊಂದೆಡೆ ೧೦ಕ್ಕೂ ಹೆಚ್ಚು ಆನೆಗಳಿರೋ ಭುವನೇಶ್ವರಿ ಗ್ಯಾಂಗ್, ಇನ್ನೊಂದೆಡೆ ಮರ‍್ನಾಲ್ಕು ಟೀಂ ಮೇಟ್ಸ್ ಇರೋ ಗ್ಯಾಂಗ್.. ಇವುಗಳ ಮಧ್ಯೆ ನಾನೇನು ಕಡಿಮೆ ಅಂತಾ ಹಾವಳಿ ಇಡ್ತಿರೋ ಒನ್ ಅಂಡ್ ಒನ್ಲಿ , ಒಂಟಿ ಕೊಂಬಿನ ಒಂಟಿ ಸಲಗ ಭೀಮ.! ಹೀಗೆ ೪೦ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮೂಡಿಗೆರೆ ತಾಲೂಕಿನಾದ್ಯಂತ ತಮ್ಮ ದರ್ಬಾರ್ ನಡೆಸುತ್ತಿದೆ.. ಹೀಗಾಗಿ ರೈತರ, ಜನಸಾಮಾನ್ಯರ ಪಾಡು, ಹೇಳತೀರಾದಾಗಿದೆ.. ತೋಟದಲ್ಲಿ ಕೆಲಸ ಮಾಡಿಸೋದು ಇರಲಿ, ತೋಟದ ಕಡೆ ಮುಖ ಹಾಕೋದೇ ದುಸ್ತರ ಆಗ್ಬಿಟ್ಟಿದೆ.!

ಹಾಗಂತ ತೋಟದಲ್ಲಿ ಮಾತ್ರ ಕಾಡಾನೆಗಳು ಹಾವಳಿ ಇಡ್ತಿಲ್ಲ, ಯಾಕೆ ನೀವು ತೋಟದ ಕಡೆ ಬರ್ತಿಲ್ಲ ಅಂತಾ ಮನೆಯಂಗಳಕ್ಕೆ ಹುಡ್ಕೊಂಡ್ ಬಂದು, ಕಿಟಕಿಯಲ್ಲಿ ಬಗ್ಗಿ ನೋಡ್ತಿದೆ, ನೀವು ಸ್ವಿಮ್ ಮಾಡೋ ಸ್ವಿಮಿಂಗ್ ಫೂಲ್ನಲ್ಲಿ ನಾನು ಸ್ವಿಮ್ ಮಾಡ್ಲಾ ಅಂತಾ ಚೆಕ್ ಮಾಡ್ತಿದೆ.. ಹೀಗೆ ಕಾಡು, ತೋಟ ಅಲ್ಲದೇ ಮನೆಗೂ ಕಾಡಾನೆಗಳು ಹುಡ್ಕೊಂಡ್ ಬರೋ ಹಂತಕ್ಕೆ ತಲುಪಿರೋದು ನಿಜಕ್ಕೂ ವಿಪರ್ಯಾಸವೇ ಸರಿ.! ಈ ಮಧ್ಯೆ ಜೀವನನಾ ..? ಜೀವ ನಾ..? ಅಂತಾ ತೋಳಲಾಟದಲ್ಲಿ ಇದೀಗ ಜನರು ಇದ್ದಾರೆ.! ಸದ್ಯಕ್ಕೆ ಜೀವ ಉಳಿದ್ರೆ ಸಾಕಾಪ್ಪ ಅಂತಾ ಅನ್ಕೊಂಡ್ರೂ, ಜೀವನದ ಭಾಗವೇ ಆಗಿರುವ ಕಾಫಿತೋಟಗಳ ಸ್ಥಿತಿಯನ್ನ ನೋಡಿ, ಕಣ್ಣೀರು ಹಾಕುವಂತ ಪರಿಸ್ಥಿತಿ ಎದುರಾಗಿದೆ.


ಇನ್ನೊಂದೆಡೆ ಕಾಡಾನೆಗಳ ಹಾವಳಿಯನ್ನ ಕಂಟ್ರೋಲ್ ಮಾಡೋಕೆ ಅರಣ್ಯ ಸಿಬ್ಬಂದಿಗಳು ಮುಂದಾದ್ರೂ ಬಲವಂತವಾಗಿ ಏನನ್ನೂ ಮಾಡದ ಅಸಹಾಯಕ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಇದೆ. ಯಾಕಂದ್ರೆ ಕಾಡಾನೆಗಳನ್ನ ದನಗಳಂತೆ ಓಡಿಸಲು ಸಾಧ್ಯವಿಲ್ಲ, ಹಾಗಂತ ಓಡಿಸದೇ ಇರೋದಕ್ಕೂ ಸಾಧ್ಯವಿಲ್ಲ.! ಒಟ್ಟಿನಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಿಬ್ಬಂದಿಗಳ, ಕಾಡಾನೆಗಳ ಚಲನವಲನಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಯಾವುದಕ್ಕೂ ಜನಸಾಮಾನ್ಯರು, ಸ್ವಲ್ಪ ಎಚ್ಚರದಿಂದ ಇರೋದು ಒಳಿತು. ಹಾಗಂತ ಕಾಡಾನೆಗಳು ಕೇವಲ ಮೂಡಿಗೆರೆಯಲ್ಲಿ ಮಾತ್ರ ಹಾವಳಿ ಇಡ್ತಾ ಇಲ್ಲ, ಬದಲಾಗಿ ಆಲ್ದೂರು, ಅರೆನೂರು, ಹ್ಯಾರಂಬಿ ಸೇರಿದಂತೆ ಬಾಳೆಹೊನ್ನೂರು, ಎನ್.ಆರ್ ಪುರ ಸುತ್ತಮುತ್ತಲೂ ಕಾಡಾನೆಗಳ ಉಪಟಳ ಹೆಚ್ಚಾಗ್ತಲೇ ಇದೆ. ಯಾವ್ದಕ್ಕೂ ನೀವು ಎಚ್ಚರ.. ಎಚ್ಚರ.!

ಪ್ರಶಾಂತ್ ಮೂಡ್ಗೆರೆ, ಪಬ್ಲಿಕ್ ಇಂಪ್ಯಾಕ್ಟ್ , ಚಿಕ್ಕಮಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!