Tuesday, March 17, 2026
Homeಕ್ರೈಮ್ಚಿಕ್ಕಮಗಳೂರು: ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ʼಕೈʼ ಸರ್ಕಾರದ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ʼಕೈʼ ಸರ್ಕಾರದ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಹಿಂದೂ ಹಿತ ರಕ್ಷಣಾ ವೇದಿಕೆ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಾಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ʼಸಹನೆ ವಹಿಸಿದ್ದು ಸಾಕು ಸಂಘರ್ಷ ಬೇಕುʼ ಎಂಬ ಧ್ಯೇಯದೊಂದಿಗೆ ಗೋಹತ್ಯೆ, ಹಿಂದುಗಳ ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿ, ಹಿಂದು ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ತಿಳಿಸಿದ್ದಾರೆ.

15 ಅಕ್ಟೋಬರ್ 2025 ಬುಧವಾರ ಕತ್ರಿಮಾರಮ್ಮ ದೇವಸ್ಥಾನದ ಆವರಣದಿಂದ ಬೆಳಗ್ಗೆ 10:30ಕ್ಕೆ
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ರಾಜ್ಯ ಸರಕಾರದ ನಿಲುವು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋ ಹತ್ಯೆ,
ಕಾಂಗ್ರೆಸ್ ಶಾಸಕರ ಬೆಂಬಲದಿಂದ ತಲೆಯೆತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡುವಂತೆ ಆಗ್ರಹಿಸಲಾಗುತ್ತೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ, ಬೆದರಿಸುವ ಗೊಡ್ಡು ತಂತ್ರದ ವಿರುದ್ಧ,ಶತಮಾನಗಳ ಹಿಂದೂ ಸಂಸ್ಕೃತಿಯ ಆಚರಣೆಯನ್ನು ನಿರ್ಬಂಧಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರಸಿದ್ಧ ದೇವಿರಮ್ಮನ ಬೆಟ್ಟಕ್ಕೆ ರಾತ್ರಿ ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಿರುವುದನ್ನು ಖಂಡಿಸಿ,ಸುಪ್ರೀಂ ಕೋರ್ಟ್ ಆಜ್ಞೆ ದಿಕ್ಕರಿಸಿ ರಸ್ತೆಗೆ ಅಡ್ಡವಾಗಿರುವ ನಗರದ ಉಪ್ಪಳ್ಳಿಯಲ್ಲಿ ರಸ್ತೆಯನ್ನೇ ಪಕ್ಕಕ್ಕೆ ತಳ್ಳಿ ದರ್ಗಾ ನಿರ್ಮಿಸುವುದರ ವಿರುದ್ಧ,

ಬಣಕಲ್, ಆಲ್ದೂರು ವಾರದ ಸಂತೆಗಳಲ್ಲಿ ಸಾರ್ವಜನಿಕವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದರು ಆರೋಪಿಗಳ ವಿರುದ್ಧ ಸ್ಥಳೀಯ ರಾಜಕೀಯ ನಾಯಕರ ಒತ್ತಡಕ್ಕೆ ಒಳಗಾಗಿ ಯಾವುದೇ ಕಠಿಣ ಕಾನೂನು ಕ್ರಮ ಜರುಗಿಸದಿರುವ ಜಿಲ್ಲಾಡಳಿತದ ವಿರುದ್ಧ,ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರ ವಿರುದ್ಧ ತಮ್ಮ ಅತಿಯಾದ ಮುಸ್ಲಿಂ ತುಷ್ಟಿಕರಣದ ನೀತಿಯಿಂದಾಗಿ ಕ್ರಮ ಜರುಗಿಸದಿರುವ ಹಾಗೂ ಅನೇಕ ವಿಚಾರಗಳನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಹಿತ ರಕ್ಷಣಾ ವೇದಿಕೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!