ಚಿಕ್ಕಮಗಳೂರು : ನಿರುದ್ಯೋಗಿ ಯುವಕರಿಗಾಗಿ “ಸ್ವಾವಲಂಬಿ ಸಾರಥಿ ಯೋಜನೆ” ಯನ್ನು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮವು ಪ್ರವರ್ಗ-3ಬಿ ಯಡಿ ಜಾರಿಗೆ ತಂದಿದ್ದು
ಇದರ ಅಡಿಯಲ್ಲಿ, ನಾಲ್ಕು ಚಕ್ರಗಳ ವಾಹನ ಖರೀದಿಗೆ ಘಟಕ ವೆಚ್ಚದ ಶೇ.50 ರಷ್ಟು, ಗರಿಷ್ಠ ₹3 ಲಕ್ಷ ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರು 21-45 ವರ್ಷ ವಯಸ್ಸಿನವರಾಗಿರಬೇಕು ಮತ್ತು ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಮುಖ್ಯ ಮಾಹಿತಿ ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ (ಒಕ್ಕಲಿಗ ಸಮುದಾಯಕ್ಕೆಂದೇ ಇರುವ ಉಪ-ಯೋಜನೆಯಾಗಿದ್ದು
ಒಕ್ಕಲಿಗ ಸಮುದಾಯದ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಸಹಾಯ ಮಾಡುವುದು.ಪ್ರಮುಖ ಉದ್ದೇಶವಾಗಿದೆ.
ಘಟಕ ವೆಚ್ಚದ ಶೇ. 50 ರಷ್ಟು, ಗರಿಷ್ಠ ₹3 ಲಕ್ಷ ರೂಪಾಯಿ ಸಹಾಯ ಧನ ಸಿಗಲಿದ್ದು ಇದರ ಪ್ರಯೋಜನ ಪಡೆಯಲು ಅಭ್ಯರ್ಥಿಗಳು
ವಯಸ್ಸು: 21-45 ವರ್ಷಗಳು.
ಅರ್ಜಿದಾರರು ಪ್ರವರ್ಗ-3ಬಿ ಒಕ್ಕಲಿಗ ಸಮುದಾಯಕ್ಕೆ ಸೇರಿರಬೇಕು.
ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ಕೆಳಗಿನಂತಿದ್ದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು, ಆಧಾರ್ ಮತ್ತು ಮೊಬೈಲ್ ನಂಬರ್ ಕಡ್ಡಾಯವಾಗಿದೆ. ನಂತರ, ಖಾತೆ ರಚಿಸಿ, “ಸ್ವಾವಲಂಬಿ ಸಾರಥಿ ಯೋಜನೆ” ಯನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
