Monday, February 9, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಉಕ್ಕಿನ ಮಹಿಳೆಯೆಂದೇ ಪ್ರಸಿದ್ಧಿ ರಾಷ್ಟ್ರ ಕಂಡ ಅಪರೂಪ ಜನನಾಯಕಿ ಇಂದಿರಾಗಾಂಧಿ: ಶಾಸಕ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು: ಉಕ್ಕಿನ ಮಹಿಳೆಯೆಂದೇ ಪ್ರಸಿದ್ಧಿ ರಾಷ್ಟ್ರ ಕಂಡ ಅಪರೂಪ ಜನನಾಯಕಿ ಇಂದಿರಾಗಾಂಧಿ: ಶಾಸಕ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು: ದೇಶಕ ಆರ್ಥಿಕತೆ ಗಟ್ಟಿಗೊಳಿಸಿ, ಹೂಳುವವನಿಗೆ ಭೂ ಒಡೆಯ ನೆಂಬ ಕಾನೂನು ಜಾರಿಗೊಳಿಸಿ, ರೈತರ ಬೆನ್ನೆಲುಬಾಗಿ ನಿಂತ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರ ಕಂಡ ಅಪರೂಪ ಜನನಾಯಕಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ಬುಧವಾರ ಆ ಯೋಜಿಸಿದ್ಧ ಮಾಜಿ ಪ್ರಧಾನಿ ದಿ|| ಇಂದಿರಾಗಾಂಧಿಯವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶ ಹಾಗೂ ನಾಡಿನಲ್ಲಿ ಕಾಂಗ್ರೆಸ್ ಆಡಳಿತವು ಬಡವರು, ಶೋಷಿತರು ಹಾಗೂ ಹಿಂದುಳಿದವರ ಶ್ರೇ ಯೋಭಿವದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ರಾಷ್ಟ್ರದಲ್ಲಿ ಸುಮಾರು 16 ವರ್ಷಗಳ ಕಾಲ ಆಡಳಿತ ನಡೆಸಿದ ಇಂದಿರಾಗಾಂಧಿಯವರು ಉಕ್ಕಿನ ಮಹಿಳೆಯೆಂದೇ ಪ್ರಸಿದ್ಧಿ ಪಡೆದುಕೊಂಡವರು ಎಂದರು.

ಅಂದು ಪ್ರಧಾನಿಯಾಗಿದ್ಧ ಇಂದಿರಾಗಾಂಧಿ ಪಾಕಿಸ್ತಾದ ವಿರುದ್ಧ ಯುದ್ದಸಾರಿ ವಿಜಯ ಸಾಧಿಸಿದಲ್ಲ ದೇ, ಚೀನಾ ವಿರುದ್ಧ ಧೃಢ ನಿರ್ಧಾರ ಕೈಗೊಂಡು ಗಟ್ಟಿತನ ಮೆರೆದವರು. ಅಲ್ಲಿಂದ ಇಲ್ಲಿಯತನಕ ಕಾಂಗ್ರೆಸ್ ಸರ್ಕಾರ ಆ ನಿಲುವಿನಲ್ಲೇ ಅಧಿಕಾರ ನಡೆಸಿದೆ. ಇಂದು ನಿವೇಶನ ರಹಿತ ಗ್ರಾಮಾಂತರ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಹಿರಿಯರ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ಇದೇ ವೇಳೆ ಇಂದಿರಗಾಂಧಿ ಜನ್ಮದಿನದ ಪ್ರಯುಕ್ತ ಬಡಾವಣೆಯ ನಿವಾಸಿಗಳಿಗೆ ಹಣ್ಣು, ಸಿಹಿ ವಿತರಿಸ ಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ.ಗಾಯತ್ರಿ ಶಾಂತೇಗೌಡ, ನಗರಸಭೆ ಸದಸ್ಯರಾದ ಮುನೀರ್ ಅಹ್ಮದ್, ಖಲಂಧರ್, ಮಾಜಿ ಸದಸ್ಯೆ ಸುರೇಖಾ ಸಂಪತ್, ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷರಾದ ಮಲ್ಲಿಕಾದೇವಿ, ನೇತ್ರಾವತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಮುಖಂಡ ರುಗಳಾದ ಕುಸುಮ, ರಾಮಚಂದ್ರ, ಅನ್ಸರ್‌ಆಲಿ, ಪ್ರಸಾದ್ ಅಮೀನ್, ಜಯಂತಿ, ಹಿರೇಗೌಜ ಶಿವು ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!