ಚಿಕ್ಕಮಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜಾಗತಿಕ ಅನಿಲ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದು, ಭಾರತದಲ್ಲಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ತೀವ್ರವಾಗಿ ಕುಸಿದಿದೆ.ಅಷ್ಟೇ ಅಲ್ಲದೆ ಜನರು ಸಹ ಕಮರ್ಷಿಯಲ್ ಗ್ಯಾಸ್ ಸಿಗದೆ ಪರದಾಡುತ್ತಿದ್ದಾರೆ.
ಅದೇ ರೀತಿ ಕಾಫಿನಾಡಿಗೂ ತಟ್ಟಿದ ಇಸ್ರೇಲ್-ಇರಾನ್ ಯುದ್ಧದ ಬಿಸಿ ಗ್ಯಾಸ್ ತುಂಬಿಸಿಕೊಳ್ಳಲು ಸಾಲುಗಟ್ಟಿ ನಿಂತ ಆಟೋಗಳು ಚಿಕ್ಕಮಗಳೂರು ನಗರದಲ್ಲಿ ಆಟೋ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.
ಬೇಲೂರು ರಸ್ತೆಯಲ್ಲಿ ಗಂಟೆಗಂಟಲ್ಲೇ ಗ್ಯಾಸ್’ಗಾಗಿ ಕ್ಯೂನಲ್ಲಿ ನಿಂತಿರೋ ಚಾಲಕರು ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಬಂಕ್ ಮಾಲೀಕರು ಲೀಟರ್ ಗ್ಯಾಸ್ ಬೆಲೆ 58 ರೂಪಾಯಿಂದ 90 ರೂಪಾಯಿಗೆ ಏರಿಕೆ ಮಾಡಿದ್ದಾರೆ.
ಬೆಲೆ ಏರಿಕೆಗೆ PUBLIC IMPACT ಜೊತೆ ಆಕ್ರೋಶ ಹೊರಹಾಕಿದ ಚಾಲಕರು ಬಾಡಿಗೆ ಜಾಸ್ತಿ ತಗೊಳ್ಳ ಹಾಗಿಲ್ಲ, ಆದ್ರೆ ರೇಟ್ ಜಾಸ್ತಿ ಮಾಡಿದ್ದಾರೆ ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮನ್ನ ಎಂದ ಚಾಲಕರು ಕಿಡಿ ಕಾರಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದ್ದಾರೆ.
