ಚಿಕ್ಕಮಗಳೂರು: ಒಂದು ತಿಂಗಳಲ್ಲಿ ಫಸಲಿಗೆ ಬರಲಿದ್ದ ಒಂದೂವರೆ ಸಾವಿರ ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ಕಡೂರು ತಾಲೂಕಿನ ಡಿ.ಕಾರೇಹಳ್ಳಿಯಲ್ಲಿ ನಡೆದಿದೆ.

ರೈತ ಚಂದ್ರಪ್ಪ ಅವರು ಬ್ಯಾಂಕ್ ಮತ್ತು ಕೈಸಾಲದ ಮೂಲಕ ಸುಮಾರು ಐದು ಲಕ್ಷ ರೂಪಾಯಿ ಪಡೆದು ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದು, ಇನ್ನೊಂದು ತಿಂಗಳಲ್ಲಿ ಫಸಲಿನ ನಿರೀಕ್ಷೆಯಲ್ಲಿದ್ದರು. ಇದೀಗ ಕಿಡಿಗೇಡಿಗಳ ಕೃತ್ಯದಿಂದ ಕೈಬಂದ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಹಳೆ ದ್ವೇಷದಿಂದ ಕೃತ್ಯ ನಡೆದಿರುವ ಸಂಶಯವಿದ್ದು, ಜಮೀನಿಗೆ ಪೊಲೀಸರು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
