ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು 2025 -26ನ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದಿಂದ ಖರೀದಿಸಲಾದ ಎರಡು ಮಹೀಂದ್ರಾ ಬೊಲೆರೋ ವಾಹನಗಳನ್ನ ಶಾಸಕರು ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಂ ಅಮಟೆ ಮೂಲಕ ಶಾಸಕರು ಪೊಲೀಸ್ ಘಟಕಕ್ಕೆ ನೀಡಿದರು.
ಶಾಸಕರು ಪೊಲೀಸರು ಮತ್ತು ಇಲಾಖೆ ಮೇಲಿರುವ ಕಾಳಜಿಗೆ ಕೊಡುಗೆಯಾಗಿ ನೀಡಿರುವುದರಿಂದ ಶಾಸಕರ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತೀರ್ಥಹಳ್ಳಿ: ಕಾಡು ಕೋಣಗಳ ಹಾವಳಿಯಿಂದ ಭತ್ತದ ಸಸಿಗಳು ನಾಶವಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ಮರಡಿ ಸಮೀಪ ನಡೆದಿದೆ. ಹಡ್ಸೆಯ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದ್ರೇಶ್ ಹೆಚ್ ಡಿ ಎಂಬುವವರ ಗದ್ದೆಯ ಭತ್ತದ ಸಸಿಗಳನ್ನು ಕಾಡು ಕೋಣಗಳು ನಾಶ ಮಾಡಿದ್ದು, ರೈತರು ಅರಣ್ಯ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.