ಚಿಕ್ಕಮಗಳೂರು: ಕಾಫಿನಾಡಲ್ಲಿ ಧ್ವನಿವರ್ಧಕ ವಿವಾದ, ದೇವಸ್ಥಾನದಲ್ಲಿ ಭಜನೆ ಹಾಡು, ಜಾಗಟೆ, ಘಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆಯೆಂದು ಮುಸ್ಲಿಂ ವ್ಯಕ್ತಿಯೊಬ್ಬ ಚಿಕ್ಕಮಗಳೂರಿನ ಹಳೆ ಉಪ್ಪಳ್ಳಿಯ ಈಶ್ವರ ದೇವಾಲಯದ ಎದುರು ಹೈಡ್ರಾಮ ನಡೆಸಿದ್ದಾನೆ.
Follow the Public impact Media channel on WhatsApp: https://whatsapp.com/channel/0029VaAUBknChq6Ibwwvi12W
PUBLIC IMPACT CHANNEL’ನ ಪ್ರತಿಯೊಂದು ಸುದ್ದಿಗಳು ಇಲ್ಲಿ ಸಿಗುತ್ತದೆ. ಮೇಲಿನ ಲಿಂಕ್ ಮೂಲಕ ಜಾಯಿನ್ ಆಗಿ.
ಹೌದು .. ನಗರದ ಹಳೆ ಉಪ್ಪಳ್ಳಿಯ ಈಶ್ವರ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದ್ದುಇದೊಂದು ಪುರಾತನ ದೇವಾಲಯವಾಗಿದೆ. ಭಜನೆ ಶಬ್ದ ಹಾಕುವುದನ್ನ ನಿಲ್ಲಿಸ್ಬೇಕು ಇಲ್ಲಾ ಅಂದ್ರೆ ಪೊಲೀಸರಿಗೆ ದೂರು ನೀಡುತ್ತೇನೆಂದು ಎಂದು ತಿಳಿಸಿದ್ದಾನೆ. ಈ ವ್ಯಕ್ತಿಯು ಪೂಜಾ ಪದ್ಧತಿ ವಿರುದ್ಧ ದೂರು ನೀಡಿದ್ದು ಎಲ್ಲರ ಅಸಮಾಧಾನಕ್ಕೆ ಗುರಿಯಾಗಿದೆ.
ದೇವಾಲಯದ ಪಕ್ಕದಲ್ಲೇ ವಾಸವಾಗಿರುವ ಫಾರೂಕ್ ಶಬ್ದದಿಂದ ದೇವಸ್ಥಾನದ ಅಕ್ಕಪಕ್ಕದ ನಿವಾಸಿಗೆ ತೊಂದರೆ ಹಾಗೆ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಪಟ್ಟು ಹಿಡಿದಿದ್ದಾನೆ ಹಾಗೆ ಪೊಲೀಸರಿಗೆ ಸಹ ದೂರು ನೀಡಿದ್ದಾನೆ.
ನಾವು ಧ್ವನಿವರ್ಧಕವನ್ನ ನಿಧಾನವಾಗಿ ಬಳಸುತ್ತೇವೆ ಹಾಗೆ ಕೇವಲ ಮಂಗಳಾರತಿ ಸಮಯದಲ್ಲಿ ಸುಮಾರು ಹತ್ತು ನಿಮಿಷಗಳ ಅವಧಿಗೆ ಮಾತ್ರ ಭಜನೆಗಳನ್ನು ಹಾಕಲಾಗುತ್ತೆ ಎಂದ ಅರ್ಚಕ ಜಗದೀಶ್ ತಿಳಿಸಿದ್ದಾರೆ.
ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಟ್ಟಿನಲ್ಲಿ ಭಕ್ತಿಯ ಜಾಗದಲ್ಲಿ ವಿವಾದಕ್ಕೆ ಗುರಿಯಾಗಿದ್ದು ಪೊಲೀಸರ ನಡೆ ಹಾಗೂ ಮುಸ್ಲಿಂ ವ್ಯಕ್ತಿಯ ದೂರು ಎಲ್ಲರ ಮನಸ್ಸಿಗೆ ನೋವುಂಟು ಮಾಡಿದೆ. ಈ ವಿವಾದಕ್ಕೆ ಯಾವ ರೀತಿ ಪರಿಹಾರ ಒದಗಿಸುತ್ತಾರೆ ಕಾದುನೋಡಬೇಕಿದೆ.
