ಚಿಕ್ಕಮಗಳೂರು: ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ‘ಗಣಪತಪ.. ಐಸಾ.. ಅವನ ಹೊಟ್ಟೆ ನೋಡಿ.. ಅವನ ಸೊಂಡಿಲು ನೋಡಿ.. ಐಸಾ’ ಎಂದು ಗಣೇಶನ ರೂಪ ವರ್ಣಿಸುವುದು. ‘ಗಣೇಶ ಬಂದ.. ಕಾಯಿ ಕಡುಬು ತಿಂದ.. ಚಿಕ್ಕ ಕೆರೆಯಲ್ಲಿ ಬಿದ್ದ.. ದೊಡ್ಡ ಕೆರೆಯಲ್ಲಿ ಎದ್ದ’ ಎಂದು ಕೂಗುತ್ತಾ ಸಂಭ್ರಮದಿಂದ ಎಲ್ಲೆಲ್ಲೂ ಹಬ್ಬ ಆಚರಿಸುತ್ತಾರೆ.
ತಿಂಗಳಾನುಗಟ್ಟಲೆ ಗಣೇಶನನ್ನು ಕೂರಿಸಿ ಹಬ್ಬ ಆಚರಿಸುವುದು ವಾಡಿಕೆ. ದೇವಾಲಯ-ಚಪ್ಪರಗಳ ಅಲಂಕಾರ, ಸಂಗೀತ ಕಾರ್ಯಕ್ರಮ, ರುಚಿಕರವಾದ ಸಿಹಿತಿಂಡಿಗಳ ತಯಾರಿಯು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಗಣೇಶ ಚತುರ್ಥಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಹೌದು .. ಚಿಕ್ಕಮಗಳೂರಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲೆಯ ಜನತೆಗೆ ಹಸಿರು ಫೌಂಡೇಷನ್ ವತಿಯಿಂದ ವಿಶೇಷ ವಿನೂತನ ಸ್ಪರ್ಧೆ ಏರ್ಪಾಡಿಸಲಾಗಿದ್ದು ಪರಿಸರ ಸ್ನೇಹಿ ಗಣೇಶನ ಮೂರ್ತಿ ನಿರ್ಮಿಸಿ ಬಹುಮಾನ ಗೆಲ್ಲಬಹುದು. ಈ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಳ್ಳಲು ಆಗಸ್ಟ್ 25 ಕೊನೇ ದಿನವಾಗಿದ್ದು ಆ ನಂತರ ಆಗಸ್ಟ್ 30 ಶನಿವಾರದಂದು ಈ ಕಾರ್ಯಕ್ರಮವು ಏರ್ಪಟ್ಟಿರುತ್ತದೆ. ಈ ಕಾರ್ಯಕ್ರಮವು ಸ್ಕೌಟ್ಸ್ & ಗೈಡ್ ಭವನದಲ್ಲಿ ಅವರ ನೇತೃತ್ವದಲ್ಲೇ ಆಯೋಜಿಸಲಾಗಿದೆ.
ಹಸಿರು ಫೌಂಡೇಷನ್ ಸಂಸ್ಥೆಯು ಪರಿಸರ ಕಾಳಜಿಯನ್ನು ಎತ್ತಿ ಹಿಡಿಯಲು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಲ್ಲೆಯ ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹಾಗೆ ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಹಸಿರು ಫೌಂಡೇಷನ್ ವತಿಯಿಂದ ವಿತರಿಸಲಾಗುವುದು. ಹಾಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವವರಿಗೆಲ್ಲಾ ಪ್ರಮಾಣ ಪತ್ರ ನೀಡಲಾಗುತ್ತದೆ.
