Saturday, March 28, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ರಂಗಭೂಮಿ ರತ್ನಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಮೂಡಿಗೆರೆ

ಚಿಕ್ಕಮಗಳೂರು: ರಂಗಭೂಮಿ ರತ್ನಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಮೂಡಿಗೆರೆ

ಜೈ ಕರ್ನಾಟಕ ಸೇನೆ ಬೆಂಗಳೂರು ಇವರ ವತಿಯಿಂದ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಂಗಭೂಮಿ ರತ್ನ ಪ್ರಶಸ್ತಿಗೆ ರಂಗ ಭೂಮಿ ಕಲಾವಿದ ಪ್ರಕಾಶ್ ಮೂಡಿಗೆರೆ ಆಯ್ಕೆಯಾಗಿದ್ದಾರೆ

ಪ್ರಕಾಶ್ ಮೂಡಿಗೆರೆ ಅವರಿಗೆ ರಂಗಭೂಮಿ ರತ್ನ ಬಿರುದು ನೀಡಿ ಗೌರವಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ಇವರ ಅನುಪಸ್ಥಿತಿಯಲ್ಲಿ ಧರ್ಮಪತ್ನಿ ಪರಿಮಳ ಪ್ರಕಾಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಕಾಶ್ ಹುಬ್ಬಳ್ಳಿ ವಾಸಿಯಾಗಿದ್ದು ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಗ್ರಾಮದವರಾಗಿದ್ದಾರೆ. ರಾಮೇಗೌಡ ಶಾರದಾ ದಂಪತಿಗಳ ಪುತ್ರರಾಗಿರುತ್ತಾರೆ

ರಂಗ ಭೂಮಿಯಲ್ಲಿ ಇವರು ಸಲ್ಲಿಸಿದ ಸೇವೆ ಗುರುತಿಸಿ ರಂಗ ಭೂಮಿ ರತ್ನ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ. ಅದಲ್ಲದೆ ಕಳೆದ ವರ್ಷ ಕಲಾವಿದ ಸೇವೆಗೆ ಸರ್ಕಾರದ ವತಿಯಿಂದ ರಾಜ್ಯ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದರು ಎಂಬುದು ಹೆಮ್ಮೆಯ ವಿಚಾರ.ಇವರ ಕಲಾ ಸೇವೆಗೆ ಪ್ರಶಸ್ತಿ ಲಭಿಸಿದ್ದು ಕಲಾವಿದರು.
ಸ್ನೇಹಿತರು. ಕುಟುಂಬ ಬಂಧು ಬಳಗಕ್ಕೂ ಖುಷಿ ತಂದಿದ್ದು ಶುಭಾಶಯಗಳ ಮಹಪೂರ ಹರಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!