Monday, February 9, 2026
Homeಜಿಲ್ಲಾಸುದ್ದಿಜಾತ್ರೆಗೆ ಕಡಿಯಲು ತಂದಿದ್ದ ಕುರಿಯಿಂದ ರೈತನಿಗೆ ಲಾಟರಿ: ಏಕಕಾಲಕ್ಕೆ 6 ಮರಿಗಳಿಗೆ ಜನ್ಮ ನೀಡಿದ ಕುರಿ!

ಜಾತ್ರೆಗೆ ಕಡಿಯಲು ತಂದಿದ್ದ ಕುರಿಯಿಂದ ರೈತನಿಗೆ ಲಾಟರಿ: ಏಕಕಾಲಕ್ಕೆ 6 ಮರಿಗಳಿಗೆ ಜನ್ಮ ನೀಡಿದ ಕುರಿ!

ಚಿಕ್ಕಮಗಳೂರು: ಕಡಿಯಲು ತಂದಿದ್ದ ಕುರಿಯೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡುವ ಮೂಲಕ ರೈತನ ಪಾಲಿಗೆ ಅದೃಷ್ಟದ ಲಾಟರಿಯಾಗಿ ಪರಿಣಮಿಸಿದೆ.

ಚಿಕ್ಕಮಗಳೂರು ನಗರದ ಹೊರವಲಯದ ಚಂದ್ರಕಟ್ಟೆಯ ನಿವಾಸಿ, ಯುವ ರೈತ ಸಂತೋಷ್ ಎಂಬುವವರು ಜಾತ್ರೆಯ ಪ್ರಯುಕ್ತ ಕಡಿಯಲು ಎರಡು ಕುರಿಗಳನ್ನು ತಂದಿದ್ದರು. ಇದರಲ್ಲಿ ಒಂದು ಕುರಿಯನ್ನು ಕಡಿದಿದ್ದ ಸಂತೋಷ್, ಮತ್ತೊಂದು ಕುರಿಯನ್ನು ಅದು ಗರ್ಭಿಣಿ ಎಂಬ ಕಾರಣಕ್ಕೆ ಹಾಗೆಯೇ ಉಳಿಸಿಕೊಂಡಿದ್ದರು.

ಆರು ಮರಿಗಳ ಜನ್ಮ

ರೈತನ ನಿರ್ಧಾರಕ್ಕೆ ಪ್ರತಿಫಲ ಎಂಬಂತೆ ಆ ಕುರಿ ಇಂದು ಬರೋಬ್ಬರಿ ಆರು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ 4 ಹೆಣ್ಣು ಮತ್ತು 2 ಗಂಡು ಮರಿಗಳಿದ್ದು, ತಾಯಿ ಕುರಿ ಹಾಗೂ ಆರು ಮರಿಗಳೂ ಕೂಡ ಅತ್ಯಂತ ಆರೋಗ್ಯವಾಗಿವೆ. ಸಾಮಾನ್ಯವಾಗಿ ಕುರಿಗಳು ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡಿರುವುದು ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

ಈ ಅಪರೂಪದ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಸಂತೋಷ್ ಅವರ ಮನೆಗೆ ಆಗಮಿಸುತ್ತಿದ್ದಾರೆ. ಸಾವಿನ ದವಡೆಯಿಂದ ಪಾರಾದ ಕುರಿ ಈಗ ರೈತನ ಪಾಲಿಗೆ ವರವಾಗಿ ಬಂದಿರುವುದು ಕೌತುಕ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!