ಚಿಕ್ಕಮಗಳೂರು: ಅಂಬೇಡ್ಕರ್ ತತ್ವ ಸಿದ್ದಾಂತದಂತೆ ರೂಪುಗೊಂಡಿರುವ ಬಹುಜನ ಸಮಾಜ ಪಕ್ಷವನ್ನು ದೇಶದ ಉಜ್ವಲ ಭವಿಷ್ಯಕ್ಕಾಗಿ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವಂತೆ ರಾಷ್ಟ್ರದ ಜನತೆಗೆ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮನವಿ ಮಾಡಿದರು.
ನಗರದ ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಸಹೋದರತ್ವ ಸಮಿತಿಯ 105ನೇ ಮಾಸಿಕ ಸಭೆಯ ಅಂಗವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ ಮತದಾರರ ಸ್ವಯಂಪ್ರೇರಿತರಾಗಿ ಬೆಂಬಲಿಸಬೇಕು”
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸ್ಥಳೀಯ ಮಟ್ಟದ ಹಲವಾರು ಚುನಾವಣೆ ಎದುರಾಗಲಿದೆ. ಆ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ಮುಂದಾಗಬೇಕು ಎಂದರು
ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರದಲ್ಲಿ ಕೆಲವು ಮಂತ್ರಿಗಳು ಜೈಲುವಾಸ ಅನುಭವಿಸಿ ಚುಕ್ಕಾಣಿ ಹಿಡಿದು ಮೆರೆಯುತ್ತಿದ್ದು ಇಂತವರಿಂದ ದೇಶವನ್ನು ಕಾಪಾಡಬೇಕು. ರಾಜಕೀಯ ಪಕ್ಷಗಳು ಹತ್ತಾರು ಸಮಸ್ಯೆಗಳನ್ನು ದೇಶಕ್ಕೆ ಹೊರಿಸುತ್ತಿದೆ. ಇದರಿಂದ ಹೊರಬರಲು ರಾಷ್ಟ್ರದಲ್ಲಿ ಬಿಎಸ್ಪಿ ಅಧಿಕಾರ ಹಿಡಿಯಬೇಕಿದೆ ಎಂದು ತಿಳಿಸಿದರು.
ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ದೇಶದಲ್ಲಿ ಮಹಾಮೇಧಾವಿ ಅಂಬೇಡ್ಕರ್ ಜನಿಸದಿದ್ದರೆ ಇಂದಿಗೂ ಗುಲಾಮರಾಗಿ ಬದುಕುವಂತ ಸ್ಥಿತಿ ನಿರ್ಮಾಣವಾಗಿತ್ತು. ಆದರೀಗ ಸಂವಿಧಾನದಡಿ ಜನತೆಯು ಉದ್ಯೋಗ, ಅಧಿಕಾರ, ಸ್ವಾತಂತ್ರ್ಯತೆ ಹಾಗೂ ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮತದಾನದ ಹಕ್ಕನ್ನು ಜನತೆಗೆ ಕೊಡಿಸಲು ಅಂಬೇಡ್ಕರ್ ಎಂದಿಗೂ ಕಟುವಾಗಿ ನಡೆದುಕೊಳ್ಳದೇ ತಾಳ್ಮೆಯಿಂದಲೇ ನಿಭಾಯಿಸಿ ಮತಚಲಾಯಿಸುವ ಹಕ್ಕು ನೀಡಿದರು. ಆದರೆ ಇಂದಿನ ರಾಜ-ಕೀಯ ಪಕ್ಷಗಳು ಅ ಧಿಕಾರದಾಸೆಗಾಗಿ ಮತಗಟ್ಟೆಗಳಲ್ಲಿ ಮತವನ್ನೇ ಕಳ್ಳತನ ಮಾಡುವ ಸ್ಥಿತಿಗೆ ತಂದೊಡ್ಡಿರುವುದು ವಿಪರ್ಯಾಸ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹೋದರತ್ವ ಸಮಿತಿ ಕಾರ್ಯದರ್ಶಿ ಕೆ. ಎಸ್.ಮಂಜುಳಾ, ಮುಖಂಡರುಗಳಾದ ಆರ್.ವಸಂತ್, ಮೊಗಣ್ಣಗೌಡ, ಮಹಾದೇವಮ್ಮ, ವಸಂತ್, ಪೊನ್ನಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
