Sunday, February 22, 2026
Homeಕ್ರೈಮ್ಚಿಕ್ಕಮಗಳೂರು: ನಾಲ್ಕು ತಿಂಗಳ‌ ಬಳಿಕ‌ ಬಯಲಾದ ರಂಜಿತಾ ಸಾವಿನ ರಹಸ್ಯ: ಗ್ಯಾಸ್ ಗೀಸರ್‌ ವಿಷ ಸೋರಿಕೆಯಿಂದ...

ಚಿಕ್ಕಮಗಳೂರು: ನಾಲ್ಕು ತಿಂಗಳ‌ ಬಳಿಕ‌ ಬಯಲಾದ ರಂಜಿತಾ ಸಾವಿನ ರಹಸ್ಯ: ಗ್ಯಾಸ್ ಗೀಸರ್‌ ವಿಷ ಸೋರಿಕೆಯಿಂದ ಸಾವು!

ಚಿಕ್ಕಮಗಳೂರು: ತಾಲೂಕಿನ ಹಾಂದಿ ಮಾಚಗೊಂಡನಹಳ್ಳಿಯ ‘ಹಿಪ್ಲಾ ಹೋಂ ಸ್ಟೇ’ಯಲ್ಲಿ ಅನುಮಾನಸ್ಪದವಾಗಿ ಯುವತಿ ಮೃತಪಟ್ಟಿದ್ದ ಪ್ರಕರಣ ಸಂಬಂಧಿಸಿದಂತೆ ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್‌ ವಿರುದ್ಧ ಆಲ್ದೂರು ಠಾಣೆಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ.

ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ(26) ಕಳೆದ‌ ವರ್ಷ ಅಕ್ಟೋಬರ್ 25ರಂದು ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದ ವೇಳೆ ಕಾರ್ಬನ್ ಮಾನಾಕ್ಸೈಡ್ ವಿಷಬಾಧೆಯಿಂದ ಸಾವನ್ನಪ್ಪಿದ್ದಳು.ಸ್ನಾನಕ್ಕೆ ಹೋದ ವೇಳೆ ಬಾತ್‌ರೂಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದರು ಮರಣೋತ್ತರ ಪರೀಕ್ಷಾ ವೇಳೆ ಸಾವಿನ ಹಿಂದಿನ ನೈಜ ಕಾರಣ ಬಯಲಾಗಿತ್ತು. ಗ್ಯಾಸ್‌ ಗೀಸ್‌ ಸೋರಿಕೆಯಿಂದ ಕಾರ್ಬನ್ ಮಾನಾಕ್ಸೈಡ್ ಅನಿಲ ಸೋರಿಕೆಯಿಂದ ರಂಜಿತಾ ಸಾವನ್ನಪ್ಪಿದ್ದು ದೃಢವಾಗಿತ್ತು.

ಸ್ಣಾನದ ಕೋಣೆಯಲ್ಲಿ ಸರಿಯಾದ ವೆಂಟಿಲೇಶನ್ ವ್ಯವಸ್ಥೆ ಇಲ್ಲದಿದ್ದದ್ದೇ ದುರಂತಕ್ಕೆ ಕಾರಣವಾಗಿದ್ದು ಹೋಂ ಸ್ಟೇ ಮಾಲೀಕರ ನಿರ್ಲಕ್ಷ್ಯವೇ ಸಾವಿಗೆ ನೇರ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಸಮಗ್ರ ತನಿಖೆಯಿಂದ ಹೋಂ ಸ್ಟೇ ಮಾಲೀಕರ]ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ತೀವ್ರವಾಗಿ ಚುರುಕುಗೊಳಿಸಿದ್ದಾರೆ.

ಅಕ್ಟೋಬರ್ 25 ಬೆಳಗ್ಗೆ ರೇಖಾ ಸ್ನಾನ ಮಾಡಿ ಬಂದ ನಂತರ ರಂಜಿತಾ ಸ್ನಾನಕ್ಕೆ ತೆರಳಿದ್ದರು. ತುಂಬಾ ಹೊತ್ತಾದರೂ ಅವರು ಹೊರ ಬಾರದಿದ್ದಾಗ ಮತ್ತು ನಲ್ಲಿಯ ನೀರು ಹರಿಯುವ ಶಬ್ದ ನಿರಂತರವಾಗಿ ಕೇಳುತ್ತಿದ್ದಾಗ ರೇಖಾ ಅವರು ಬಾಗಿಲು ಬಡಿದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಿಟಕಿಯಿಂದ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಹೋಂ ಸ್ಟೇ ಸಿಬ್ಬಂದಿಗೆ ಮಾಹಿತಿ ನೀಡಿ ಬಾಗಿಲು ಒಡೆದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಂಜಿತಾರನ್ನು ಮೂಡಿಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಯುವತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.

ಮೃತಳನ್ನ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಾಲಾಪುರ ಗ್ರಾಮದ ರಂಜಿತಾ (27) ಎಂದು ಗುರುತಿಸಲಾಗಿದೆ. ಮೃತ ರಂಜಿತಾ ದಾವಣಗೆರೆ ಮೂಲದ ಗೆಳತಿ ರೇಖಾ ಅವರೊಂದಿಗೆ ಶುಕ್ರವಾರ ಸಂಜೆ ಹೋಂ ಸ್ಟೇನಲ್ಲಿ ತಂಗಿದ್ದರು. ಸ್ನೇಹಿತೆಯೊಬ್ಬಳ ನಿಶ್ಚಿತಾರ್ಥಕ್ಕಾಗಿ ರಂಜಿತಾ ಮತ್ತು ರೇಖಾ ಬೆಂಗಳೂರಿನಿಂದ ಬಂದಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!