Saturday, February 28, 2026
Homeಕ್ರೈಮ್ಚಿಕ್ಕಮಗಳೂರು: ವಾಯು ವಿಹಾರಕ್ಕೆ ತೆರಳಿದ್ದಾಗ ವೃದ್ದೆಯನ್ನು ಅಡ್ಡಗಟ್ಟಿ ಮಾಂಗಲ್ಯ ಚೈನ್‌ ಎಗರಿಸಿದ ಕಳ್ಳರು!

ಚಿಕ್ಕಮಗಳೂರು: ವಾಯು ವಿಹಾರಕ್ಕೆ ತೆರಳಿದ್ದಾಗ ವೃದ್ದೆಯನ್ನು ಅಡ್ಡಗಟ್ಟಿ ಮಾಂಗಲ್ಯ ಚೈನ್‌ ಎಗರಿಸಿದ ಕಳ್ಳರು!

ಚಿಕ್ಕಮಗಳೂರು:  ಚಂದ್ರನಗರ ನಿವಾಸಿ ವೃದ್ಧ ಮಹಿಳೆ ಒಬ್ಬರು ವಾಕ್ ಮಾಡುತ್ತಿದ್ದ ವೇಳೆ ಚಿನ್ನದ ಮಾಂಗಲ್ಯದ ಸರಗಳ್ಳತನ ಆಗಿರುವುದಾಗಿ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಎಂದಿನಂತೆ  ಮನೆಯಿಂದ ವಾಕ್ ಹೊರಟು ಚಂದ್ರನಗರ ದಾಟಿ ಕೆಂಪನಹಳ್ಳಿ ಕಡೆ ರಸ್ತೆಯಲ್ಲಿ ವಾಕ್ ಮಾಡಿಕೊಂಡು ಬಂದು ಸಾಯಿಬಾಬ ಸಾಮೀಲ್ ದಾಟಿ ಬರುವಾಗ ಮಂಡಿ ನೋವಾಗಿದ್ದರಿಂದ ರಸ್ತೆಯ ಪಕ್ಕದಲ್ಲಿದ್ದ ಸೇತುವೆ ಮೇಲೆ ಕುಳಿತು ವಿಶ್ರಾಂತಿಯನ್ನು ಪಡೆಯುತ್ತಿದ್ದ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್ ಧರಿಸಿ ಸ್ಕೂಟಿಯಲ್ಲಿ ಕರ್ಕಿಪೇಟೆ ಕಡೆಯಿಂದ ಬಂದವರು ಹತ್ತಿರ ಬಂದು ಏನೋ ಮಾತನಾಡಿದ್ದು, ಅದು ನನಗೆ ಸರಿ ಕೇಳಿಸಿರುವುದಿಲ್ಲ.

ನಂತರ ಅಲ್ಲಿಂದ ಅವರು ಸ್ಕೂಟಿಯಲ್ಲಿ ಮುಂದೆ ಹೋದಂತೆ ಮಾಡಿ ಪುನಃ ಸ್ಕೂಟಿಯನ್ನು ಹಿಂದಕ್ಕೆ ತಿರುಗಿಸಿಕೊಂಡು ಬಂದಿದ್ದು ನಾನು ಎದ್ದು, ಹೊರಟು ನಿಂತಿದ್ದಾಗ ನನ್ನನ್ನು ಅಡ್ಡಗಟ್ಟಿ ತಡೆದು ಏಕಾಏಕಿಯಾಗಿ ಸ್ಕೂಟಿಯ ಹಿಂದೆ ಕುಳಿತಿದ್ದ ಅಪರಿಚಿತ ವ್ಯಕ್ತಿಯು ನನ್ನ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡಾಗ ಕೂಡಲೆ ನಾನು ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಕಿರುಚಾಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ನನಗೆ ಜೀವ ಬೆದರಿಕೆ ಹಾಕಿ ನನ್ನ ಕುತ್ತಿಗೆ ಹಿಡಿದು ಸೇತುವೆ ಮೇಲೆ ತಳ್ಳಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಜೊರಾಗಿ ತಳ್ಳಿದ ಪರಿಣಾಮ ನನ್ನ ಬಲ ಮೊಣಕೈಗೆ ರಕ್ತಗಾಯಗಳಾಗಿರುತ್ತದೆ.

ಎರಡು ಜನರು ಕಪ್ಪು ಬಣ್ಣದ ಜರ್ಕೀನ್ ಧರಿಸಿರುತ್ತಾರೆ. ನನ್ನ ಮಾಂಗಲ್ಯ ಚಿನ್ನದ ಸರದ ಬೆಲೆ ಅಂದಾಜು 2,25,000 ರೂ ಆಗಿರುತ್ತದೆ. ನನಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರನ್ನು ನೀಡಿದ್ದು. ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!